ರಾಣೆಬೆನ್ನೂರ

ಪೌರ ಕಾರ್ಮಿಕರ ಮುಷ್ಕರ: ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಣೆ, ಶಾಸಕರಿಗೆ ಮನವಿ

ಪೌರ ಕಾರ್ಮಿಕರ ಮುಷ್ಕರ: ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಣೆ, ಶಾಸಕರಿಗೆ ಮನವಿ

ರಾಣೆಬೆನ್ನೂರು 05: ಕರ್ನಾಟಕ  ರಾಜ್ಯ ಪೌರ ಸೇವಾ ನೌಕರರ ಸಂಘವು ನೀಡಿದ ಕರೆಯ ಮೇರೆಗೆ, ತಾಲೂಕ ಸಂಘದ ಪೌರಕಾರ್ಮಿಕರು, ಇಲ್ಲಿನ ವಿನಾಯಕ ನಗರದ ಶಾಸಕ ಅರುಣ್ ಕುಮಾರ್ ಪೂಜಾರ್ ಅವರ ಕಚೇರಿಗೆ ಭೇಟಿ ನೀಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು, ನಗರ ಸ್ವಚ್ಛತೆಯಲ್ಲಿ ತಮ್ಮ ಸೇವೆ ಪ್ರಮುಖವಾಗಿದ್ದು, ತಮ್ಮ ಬಹುವರ್ಷಗಳ ಬೇಡಿಕೆ, ಇಡೇರ ಬೇಕಾದ ಅಗತ್ಯವಿದೆ ಎಂಬ ಮನೋಭಾವ ತಾವು ಸಹ ಹೊಂದಿದ್ದೇವೆ. ತಮ್ಮ ಮನವಿಯನ್ನು ಪುರಸ್ಕರಿಸಲು, ಪೌರಾಯುಕ್ತ ಸಚಿವರೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದರು. 

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ, ಅಧ್ಯಕ್ಷ ಏಳು ಕೋಟೆಪ್ಪ ಗೋಣಿಬಸಮ್ಮನವರ, ಉಪಾಧ್ಯಕ್ಷ  ಸಂಘಟನೆಯ ಮುಖಂಡರಾದ, ಉಪಾಧ್ಯಕ್ಷೆ  ಮಾಳಮ್ಮ ಎಂ.ಬಿರಾಳ, ಕಾರ್ಯದರ್ಶ  ಮಾಧವ  ಸಾತೇನಹಳ್ಳಿ, ವ್ಯವಸ್ಥಾಪಕ.ಎಲ್. ಶಂಕರ್ಡಿ.ಡಿ. ಕಾಟಿ, ಸುರೇಶ ಚಲವಾದಿ, ನಾಗರತ್ನ ಕೋರಿ, ರಾಜೇಶ್ವರಿ ಹರಪನಹಳ್ಳಿ, ಪ್ರಭು  ಬಾಲೆಹೊಸೂರು, ಗಣೇಶ ಫಾಸಿಗಾರ್, ಜಿ.ಎಂ.ವಾಣಿಶ್ರೀ, ಮಂಜುಳಾದೇವಿ ಮುಂಡಾಸದ, ಮಧು ಕಂಬಳಿ, ರಾಘವೇಂದ್ರ ಗಾವಡೆ, ನಿಂಗಪ್ಪ ಮುದಿ ಕರಿಯಪ್ಪನವರ, ನಾಗರಾಜ ಪೂಜಾರ್, ಎಲ್ಲಪ್ಪ ಮರಿಯಮ್ಮನವರ, ಲಲಿತವ್ವ ಜಲ್ಲಾವರ, ದುರ್ಗವ್ವ ಶಿವಪ್ಪನವರ  ನಾಗರಾಜ ನಂದಿಹಳ್ಳಿ, ದಿಳ್ಳೆಪ್ಪಾ, ಕುಬೇರ, ರಾಜೇಂದ್ರ, ಹೆಚ್. ಗಜೇಂದ್ರ ಪರಮೇಶ್,ನೀಲಪ್ಪ,ನಾಗರಾಜ್,ಕವಿತಾ, ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 

ಸುದ್ದಿ ಓದಿ