ಕ್ರಿಸ್ಮಸ್, ಹೊಸವರ್ಷ: ಚಿಕ್ಕಮಕ್ಕಳಿಗೆ ವಿಶೇಷ ಕಾರ್ಯಕ್ರಮ
ಕಾಗವಾಡ 29: ತಾಲೂಕಿನ ಉಗಾರ್ ಪಟ್ಟಣದ ಬಾಲಮಂದಿರದಲ್ಲಿ ಚಿಕ್ಕ ಬಾಲಕರೊಂದಿಗೆ ಉಗಾರ್ ಮಹಿಳಾ ಮಂಡಲ ಅಧ್ಯಕ್ಷ ಮತ್ತು ಸಕ್ಕರೆ ಉದ್ಯಮಿ ಸ್ಮಿತಾತಾಯಿ ಶಿರಗಾಂವಕರ್ ಇವರು ಚಿಕ್ಕಮಕ್ಕಳೊಂದಿಗೆ ಕುಣಿದು ಅವರೊಂದಿಗೆ ಬೆರೆತು ಕ್ರಿಸ್ಮಸ್ ಹಬ್ಬ ಹಾಗೂ ಹೊಸವರ್ಷದ ಸ್ವಾಗತಕ್ಕಾಗಿ ಕಾರ್ಯಕ್ರಮ ನೆರವೇರಿಸಿದರು.
ಬುಧವಾರ ದಿ. 29ರಂದು ಉಗಾರ ಬಾಲಮಂದಿರ ಸಭಾಭವನದಲ್ಲಿ ಚಿಕ್ಕ ಬಾಲಕರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಳೆದ ಎರಡು ವರ್ಷಗಳಿಂದ ಕೋರೊನಾ ಮಹಾಮಾರಿ ಯಿಂದ ಅನೇಕ ಕುಟುಂಬಗಳು ಭಯಭೀತರಾಗಿ ತಮ್ಮ ಕಾರ್ಯಕಲಾಪಗಳನ್ನು ಬದಿಗಿಟ್ಟು ಬಾಳುತ್ತಿದ್ದರು. ಈಗ ಸ್ವಲ್ಪ ಕೋರೊನಾದಿಂದ ರಿಲೀಫ್ ಸಿಕ್ಕಿದ್ದರಿಂದ, ಸ್ಮಿತಾ ತಾಯಿ ಇವರು ಬಾಲಮಂದಿರದ ವಿದ್ಯಾಥರ್ಿಗಳಿಗೆ ಕ್ರಿಸ್ಮಸ್ ಹಬ್ಬ ಆಚರಿಸಿ ಹಾಗೂ ಹೊಸವರ್ಷ ಸ್ವಾಗತಿಸಿ ಎಲ್ಲರೊಂದಿಗೆ ಬೆರೆತು ಸಂತೋಷ ಹಂಚಿಕೊಂಡರು.
ತಾನೊಬ್ಬ ಉದ್ಯಮಿ, ಶ್ರೀಮಂತರು ಎಂಬುದನ್ನು ಮರೆತು ಎಲ್ಲರೊಂದಿಗೆ ಒಂದಾಗಿ ಈ ಸಮಾರಂಭದ ಎಂಜಾಯ್ ಮಾಡಿದರು.
ಸ್ಮಿತಾತಾಯಿ ಶಿರಗಾಂವ್ಕರ್ ಮಾತನಾಡುವಾಗ ಕಳೆದ ಎರಡು ವರ್ಷಗಳಿಂದ ಕೋರೊನಾ ಮಹಾಮಾರಿ ನಮ್ಮಲ್ಲಿಯ ಸಂತೋಷ, ಉತ್ಸಾಹ, ನೆಮ್ಮದಿ ಭಾವನೆ ಕಸಿದುಕೊಂಡಿದೆ. ಈಗ ನಾವು ಒಂದಾಗಿ ಚಿಕ್ಕಮಕ್ಕಳಲ್ಲಿ ಸಂತೋಷ ಕಾಣಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿ ಹೊಸವರ್ಷದಲ್ಲಿ ಕೋರೊನಾ ಮಹಾಮಾರಿಯನ್ನು ಒಂದಾಗಿ ಎದುರಿಸೋಣ ಎಂಬ ಸಂದೇಶ ನೀಡಿದರು.
ಮುಖ್ಯಾಧ್ಯಾಪಕ ಮಂಗಲ್ ದಿವಾನ್, ಲತಾ ಪಟ್ಟಣಶೆಟ್ಟಿ ಇವರು ಬಾಲಕರಿಂದ ಬೇರೆ ಬೇರೆ ಕಾರ್ಯಕ್ರಮಗಳು ಮಾಡಿಕೊಂಡರು ಕ್ರಿಸ್ಮಸ್, ಮೇರಿ, ಸಾಂತಾಕ್ಲಾಸ್, ಚಾಲರ್ಿ ಚಾಂಪಿಯನ್, ಮಿಸ್ಟರ್ ಬಿನ್ ,ಜೋಕರ್ ಮುಂತಾದ ವೇಷಭೂಷ ಧರಿಸಿದ ಮಕ್ಕಳನ್ನು ಕಂಡು ಎಲ್ಲ ಪಾಲಕರು ಸಂತಸ ಹಂಚಿಕೊಂಡರು. ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂತೋಷ ಹಂಚಿಕೊಂಡರು.
ಶಿಕ್ಷಕ ಶೀತಲ್ ಸಫರ, ಧನಶ್ರೀ ಸಿಂದೆ, ಅಶ್ವಿನಿ ಕುಲಕಣರ್ಿ ಮತ್ತಿತರರು ಸಹಕರಿಸಿದರು