ಧಾರವಾಡ - ಹುಬ್ಬಳ್ಳಿ

ದಿ. 13ರಂದು ಚಿತ್ತಾರ ಚೇತನ ಪ್ರಶಸ್ತಿ ಪ್ರದಾನ

ದಿ. 13ರಂದು ಚಿತ್ತಾರ ಚೇತನ ಪ್ರಶಸ್ತಿ ಪ್ರದಾನ

ಧಾರವಾಡ 12: ಕರ್ನಾಟಕ ವಿದ್ಯಾವರ್ಧಕ ಸಂಘವು, ಕಲಾವಿದ ಬಿ. ಮಾರುತಿ ದತ್ತಿ ಅಂಗವಾಗಿ ದಿ. 13ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ‘ಚಿತ್ತಾರ ಚೇತನ ಪ್ರಶಸ್ತಿ’ ಪ್ರದಾನ ಹಾಗೂ ಮೂರು ದಿನಗಳ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದೆ. 

ಕ.ವಿ.ವ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಜಯನಗರ ಜಿಲ್ಲೆ ಆರ್‌.ಸಿ.ಹೆಚ್‌.ಓ ವೈದ್ಯಾಧಿಕಾರಿ ಡಾ. ಬಿ. ಜಂಬಯ್ಯ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಹಿರೇಮಲ್ಲೂರ ಈಶ್ವರನ್ ಪ.ಪೂ. ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಿ. ಶಶಿಧರ ತೋಡಕರ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಬೇಸಾಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಎನ್‌. ಅರವಿಂದಕುಮಾರ ಆಗಮಿಸುವರು.  

ಚಿತ್ತಾರ ಚೇತನ ಪ್ರಶಸ್ತಿ ಪುರಸ್ಕೃತ ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ತಾವರಗೇರೆಯ ಯುವ ಕಲಾವಿದ ಕು. ಸಂತೋಷ ಪತ್ತಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಿರಿಯ ಕಲಾವಿದ ಬಿ. ಮಾರುತಿ ಉಪಸ್ಥಿತರಿರುವರು.  

ಸಾಹಿತಿಗಳು, ಕಲಾವಿದರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಸುದ್ದಿ ಓದಿ