ರಾಣೆಬೆನ್ನೂರ

10ರಂದು ಸ್ವಾಭಿಮಾನಿ ಕರವೇ ಚಿಂತನ ಮಂಥನ ಸಮಾವೇಶ

10ರಂದು  ಸ್ವಾಭಿಮಾನಿ ಕರವೇ ಚಿಂತನ ಮಂಥನ ಸಮಾವೇಶ

ರಾಣೇಬೆನ್ನೂರು ಸೆ 9: ಕನ್ನಡ ಸಂಘಟನೆಗಳ ಉಳವಿಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಮಾಡುವುದು ಅತಿ ಅವಶ್ಯಕವಾಗಿದೆ. ಕನ್ನಡ ಭಾಷೆಯನ್ನು ಉಳಿಸಿಕೊಂಡು ಕನ್ನಡ ಜಲ ನೆಲ ಕ್ಕೋಸ್ಕರ ಹಲವಾರು ಸಂಘಟನೆಗಳ ಸಮಾಜದಲ್ಲಿ ಹುಟ್ಟಿಕೊಂಡರೆ ಅವುಗಳ ಆತ್ಮವಲೋಕನ ಮಾಡಿಕೊಳ್ಳುವ ಇಂಥದ್ದೊಂದು ಬೃಹತ್ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ತಾಲೂಕ ಕರವೇ ಸ್ವಾಭಿಮಾನಿ ಬಣದ ತಾಲೂಕ ಅಧ್ಯಕ್ಷ ಪಿ ವಿ ಮಠದ ಹೇಳಿದರು.  

ಅವರು ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಕಾರ್ಯಕಾರಣಿ ಚಿಂತನ ಮಂಥನ ಬೃಹತ್ ಸಮಾವೇಶವನ್ನು ನಮ್ಮ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಸೆಪ್ಟಂಬರ್ 10ರಂದು ಭಾನುವಾರ ಬೆಳಗ್ಗೆ 11ಗಂಟೆಗೆ ನಗರದ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಶ್ರೀ ಷ ಬ್ರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಅರಳೆಲೆ ಮಠ, ಬಂಕಾಪುರ ಮತ್ತುಶ್ರೀ ಪ ಬ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ರಾಣೇಬೆನ್ನೂರ ಇವರು ದಿವ್ಯ ಸಾನಿಧ್ಯವನ್ನು ವಹಿಸುವರು.ಉದ್ಘಾಟಕರಾಗಿ ಪಿ. ಕೃಷ್ಣಗೌಡ ರಾಜ್ಯಾಧ್ಯಕ್ಷರು ಕರವೇ ಸ್ವಾಭಿಮಾನಿ ಬಣ, ಬೆಂಗಳೂರು ಭಾಗವಹಿಸುವವರು. ಹಾವೇರಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷರಾದ  ಪರಶುರಾಮ್ ರೀತಿ ಅಧ್ಯಕ್ಷತೆಯನ್ನು ವಹಿಸುವರು ಎಂದರು.  

ಬ್ಯಾಡಗಿ ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸಾವಕ್ಕಳವರ ಮಾತನಾಡಿ ಇಂಗ್ಲೀಷ ನಾಮಫಲಕವನ್ನು ತೆರಳುಗೊಳಿಸಿ ಕನ್ನಡದ ನಾಮಫಲಕಗಳನ್ನು  ಅಳವಡಿಸುವಂತೆ ಹೇಳಿದ್ವಿ ನಮ್ಮ ಹೋರಾಟದ ಮೂಲಕ ತಾಲೂಕಿನಲ್ಲಿ 80ರಷ್ಟು ಕನ್ನಡ ನಾಮಪಲಕವನ್ನು ಅಳವಡಿಸಿದ್ದಾರೆ. ಅದಕ್ಕೆ ಸಂತಸ ತಂದಿದೆ ಹಾಗಾಗಿ ನಮ್ಮ ಬೃಹತ್ ಸಮಾವೇಶಕ್ಕೆ ಮೆರವಣಿಗೆ ಮೂಲಕ ಚಾಲನೆ ನೀಡಲು  ಪ್ರಕಾಶ್ ಕೋಳಿವಾಡ ಶಾಸಕರು ರಾಣೆಬೆನ್ನೂರು ಹಾಗೂ  ಬಿ ಎಂ ಉಮರ್ ಹಾಂಜಿ ರಾಜ್ಯ ಗೌರವ ಅಧ್ಯಕ್ಷರು ಕರವೇ ಸ್ವಾಭಿಮಾನಿ ಬಣ ಬೆಂಗಳೂರು ಚಾಲನೆ ನೀಡುವರು. ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಉಪ ಸಭಾಪತಿಗಳಾದ ರುದ್ರ​‍್ಪ ಲಮಾಣಿ ಮೆರವಣಿಗೆಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡುವರು. ಉತ್ತರ ಕರ್ನಾಟಕದ ಕರವೇ ಸ್ವಾಭಿಮಾನಿ ಬಣದ ಕಾರ್ಯಾಧ್ಯಕ್ಷರಾದ  ನಾಗರಾಜ್ ಮಡಿವಾಳರ ರಾಜ್ಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಪ್ರಸ್ತಾವಿಕವಾಗಿ ನುಡಿಗಳನ್ನು ತಾಲೂಕ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷರಾದ  ಪಿ.ವಿ.ಮಠದ ನೆರವೇರಿಸುವರು. ಕಾರ್ಯಕ್ರಮದ ವಿಶೇಷ ಸನ್ಮಾನಿತರಾದ ಲಿಂ. ವೀರಭದ್ರಯ್ಯ ಕೋಂ, ವಿಮಲಮ್ಮ ಮಠದ ಮತ್ತು ಬಸವಂತನಗೌಡ ನಿಲವ್ವ ಬೆಳಕೆರಿ ಹಾಗೂ ಮಂಜುಳಾ, ಮಲ್ಲಿಕಾರ್ಜುನ ಸಾವಕ್ಕಳವರ ಸನ್ಮಾನಿಸಲಾಗುವುದು ಎಂದರು. ಬ್ಯಾಡಗಿ ಶಾಸಕರಾದ ಬಸವರಾಜ್ ಶಿವಣ್ಣನವರ, ಹಿರೆಕೆರೂರು ಶಾಸಕರಾದ ಯುಬಿ ಬಣಕಾರ, ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ ಎಂದರುಸಂದರ್ಭದಲ್ಲಿ ರೈತ ಘಟಕ ಅಧ್ಯರಾದ ಶಿವಯೋಗಿ ಪೂಜಾರ, ತಾಲೂಕ ಕಾರ್ಯಧ್ಯಕ್ಷರಾ ಶ್ರೀಕಾಂತ ಕೆಂಪಹಾಲಪ್ಪನವರ, ಮಾಲತೇಶ ಪೂಜಾರ, ಎಂ ಸಿ ಬೆಳಕೇರಿ ಉಪಸ್ಥಿತರಿದ್ದರು. 


ಸುದ್ದಿ ಓದಿ