ಶಿಗ್ಗಾವ್

ಮಕ್ಕಳು ಆತ್ಮಸ್ತೈರ್ಯದಿಂದ ಪರೀಕ್ಷೆ ಬರೆಯಿರಿ : ದಾವಲಸಾಬ್

ಮಕ್ಕಳು ಆತ್ಮಸ್ತೈರ್ಯದಿಂದ ಪರೀಕ್ಷೆ ಬರೆಯಿರಿ : ದಾವಲಸಾಬ್

ಲೋಕದರ್ಶನ ವರದಿ

ಶಿಗ್ಗಾವಿ 29: 10ನೇ ತರಗತಿ ವಿದ್ಯಾರ್ಥಿನಿಯರು ಆತ್ಮಸ್ತೈರ್ಯದಿಂದ ಎದಗುಂದದೆ ಆತ್ಮವಿಶ್ವಾಸದಿಂದ ಪುನರ ಮನನ ಮಾಡುತ್ತಾ ಪರೀಕ್ಷೆಯನ್ನು ಬರೆಯಿರಿ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಹಾಗೂ ವರದಿಗಾರ ದಾವಲ್ಸಾಬ್ ಹುಬ್ಬಳ್ಳಿ ಹೇಳಿದರು.

ತಾಲೂಕಿನ ಹೊಸೂರು ಸರಕಾರಿ ಪ್ರೌಢಶಾಲೆಯಲ್ಲಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿ ಮಾತನಾಡಿದ  ಪರೀಕ್ಷಾ ಮಾರ್ಗಸೂಚಿಯನ್ವಯ ಅವಶ್ಯವಿರುವ ಸಲಕರಣೆಗಳನ್ನು ತೆಗೆದುಕೊಂಡು ಹೋಗಬೇಕು, ಪ್ರಶ್ನೆ ಪತ್ರಿಕೆ ನೀಡಿದ ನಂತರ ಒಂದು ಭಾರಿ ಎಲ್ಲ ಪ್ರಶ್ನೇಗಳನ್ನು ಓದಿಕೊಂಡು ಮೊದಲು ಸರಳವಾದ ಪ್ರಶ್ನೆಗಳಿಗೆ ಆ ಉತ್ತರ ಬರೆದು, ಮುಂದಿನ ಪ್ರಶ್ನೆಗಳಿಗೆ  ಉತ್ತರ ನೀಡಲು ಸಮಯವನ್ನು ಅರಿತಿರಬೇಕು. ಈ ಪರೀಕ್ಷೆ ಭವಿಷ್ಯದ ಭದ್ರಬುನಾದಿ ಎಲ್ಲರೂ ಚೆನ್ನಾಗಿ ಪರೀಕ್ಷೆ ಬರೆಯಿರಿ ಎಂದು  ಧೈರ್ಯ ತುಂಬಿದರು.

ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಲಮಾಣಿ ಮಾತನಾಡಿ ಇಂದಿನ ಯುವಕರೇ ನಾಳಿನ ಪ್ರಜೆಗಳು,  ನೀವು ಚೆನ್ನಾಗಿ ಉತ್ತಮ ರೀತಿಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪಡೆದರೆ, ಮುಂದಿನ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.

 ಶೇ 95ರಷ್ಟು ಅಧಿಕ ಅಂಕ ಪಡೆದ  ವಿದ್ಯಾರ್ಥಿಗಳಿಗೆ 5 ಸಾವಿರ ರೂ.ಗಳನ್ನು ಎಸ್ ಡಿ ಎಂ ಸಿ ಅಧ್ಯಕ್ಷ, ವರದಿಗಾರ ದಾವಲ್ಸಾಬ್ ಹುಬ್ಬಳ್ಳಿ, ಅಣ್ಣಪ್ಪ ಲಮಾಣಿ ಘೋಷಣೆ ಮಾಡಿದರು.  ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಸದಸ್ಯರಾದ ವೀರಭದ್ರಗೌಡ ಪಾಟೀಲ್, ಭೀಮಣ್ಣ ಸುಣಗಾರ, ನಿವೃತ್ರ  ಶಿಕ್ಷಕ ಏನ್ ಎಸ್ ಬರದೂರ, ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ