ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು : ಶಾಸಕ ಪ್ರಕಾಶ ಕೋಳಿವಾಡ
ರಾಣಿಬೆನ್ನೂರ 28: ಶಿಕ್ಷಣವು ಮುಕ್ತ ಜಗತ್ತನ್ನು ಪ್ರವೇಶಿಸಲು ವ್ಯಕ್ತಿಯನ್ನು ಶಕ್ತಗೊಳಿಸುತ್ತದೆ ಆದಕಾರಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ಬಿಎಜಿಎಸ್‌ಎಸ್ ಮಹಾವಿದ್ಯಾಲಯದಲ್ಲಿ ಶ್ರೀನೊಳಂಬ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ತಾಲೂಕ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣವನ್ನು ಮಕ್ಕಳಿಗೆ ಅವರ ಇಚ್ಚಾಶಕ್ತಿಯ ಮೇರಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾನಿಧ್ಯವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.
ಶಾಸಕ ಅರುಣಕುಮಾರ ಪೂಜಾರ, ಸಮಾಜದ ತಾಲೂಕಾ ಅಧ್ಯಕ್ಷ ಎಸ್.ಆರ್. ಪಾಟೀಲ, ಬಿಎಜಿಎಸ್‌ಎಸ್ ಶಿಕ್ಚಣ ಸಂಸ್ಥೆಯ ಆಡಳಿತಾಧಿಕಾರಿ ಡಾ; ಆರ್.ಎಂ. ಕುಬೇರ್ಪ, ಕುಮಾರಸ್ವಾಮಿ. ಎಮ್.ಎನ್. ಕೆಂಪಗೌಡ್ರ, ಆರ್.ಜೆ. ಪಾಟೀಲ, ಆನಂದ ದೇವರಮನಿ, ಪ್ರಭು ದೊಡ್ಡಮನಿ, ಎಸ್.ಬಿ. ಮೂಲೇರ, ಚನ್ನಬಸಪ್ಪ ಸಂಗಪ್ಪನವರ ಹಾಗೂ ಮತ್ತಿತರರು ಇದ್ದರು.