ಯರಗಟ್ಟಿ

ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸಿದ ಮಕ್ಕಳು

ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸಿದ ಮಕ್ಕಳು

ಯರಗಟ್ಟಿ 21: ಪಟ್ಟಣದ ವಿಶ್ವಕರ್ಮ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಚಿಣ್ಣರ ಉತ್ಸವದಲ್ಲಿ ಮಕ್ಕಳು ಕೃಷ್ಣ-ರಾಧೆಯರ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ತೊರಗಲ್ಲಮಠದ ದೀಪಕ ಮಹಾಸ್ವಾಮಿಗಳು ವಹಿಸಿದ್ದರು.   

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ- ರಾಧೆಯರ ಭಾವಚಿತ್ರಕ್ಕೆ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಕರ್ಮ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಆನಂದ ವಸಂತ ಸತ್ತಿಗೇರಿ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು. ಇಲಾಖಾ ಆದೇಶದ ಮೇರೆಗೆ "ಆಜಾದಿ ಕಾ ಅಮೃತ ಮಹೋತ್ಸವ" ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಏರಿ​‍್ಡಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ. ದ್ವಿತೀಯ. ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನಗಳನ್ನು ವಿಶ್ವಕರ್ಮ ಶಿಕ್ಷಣ ಸಂಸ್ಥೆಯ ವತಿಯಿಂದ ವಿತರಿಸಲಾಯಿತು. ಮೊದಲು "ನಮ್ಮವರನ್ನು ನಾವು ಗೌರವಿಸೋಣ ಪ್ರೋತ್ಸಾಹಿಸೋಣ ಹಾಗೂ ಅಭಿನಂದಿಸೋಣ" ಎಂಬ ಶೀರ್ಷಿಕೆಯಡಿ ಸಂಸ್ಥೆಯ ವತಿಯಿಂದ ಆರಂಭಿಸಲಾದ ಅಭಿಯಾನದ ಭಾಗವಾಗಿ ಶಾಲೆಯ ಸೃಜನಶೀಲ. ಕ್ರಿಯಾಶೀಲ ಶಿಕ್ಷಕರನ್ನು ಗುರುತಿಸಿ ಅಭಿನಂದಿಸಲಾಯಿತು.  

ಶಾಲೆಯ ಪ್ರಧಾನ ಗುರು ಆರ್‌.ಎಸ್‌.ಕಲ್ಲಣ್ಣವರ ಮಾತನಾಡಿ ಶಿಕ್ಷಕರೇ ಶಾಲೆಯ ಸಂಪತ್ತು. ಮಕ್ಕಳು ದೇವಲೋಕದ ತೋಟದಲ್ಲಿನ ಸುಂದರ ಪುಷ್ಪಗಳಿದ್ದಂತೆ ಮಕ್ಕಳ ಮನಸ್ಸನ್ನು ಅರಿತು ಪಾಠ ಮಾಡುವ ಕ್ರಿಯಾಶೀಲ ವ್ಯಕ್ತಿತ್ವವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ ಎಂದರು. 

ಹಿರಿಯ ಶಿಕ್ಷಕರಾದ ಪಿ. ವಾಯ್‌. ಬಾಳೋಜಿ ಎಸ್ ಪಿ ತಳವಾರ, ಎಸ್ ಬಿ ಯರಗುದ್ರಿ, ಪಿ ಕೆ ಗುಡ್ಡಾಕಾಯು, ಗುರುಮಾತೆಯರಾದ ಎ. ವಿ. ವಿಭೂತಿ, ಬಿ. ಎಸ್‌. ಗುಳಗಂದಿ, ಬಿ. ಎಸ್‌. ಹಿರೇಮಠ, ಎಸ್‌. ಎ. ಕರ್ಜಗಿಮಠ, ವಿ. ಎಸ್‌. ವಿರಕ್ತಮಠ, ಪಿ. ಬಿ. ಮುರಗೋಡ ಹಾಗೂ ಶಾನೂರ ಜಮಾದಾರ ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್‌. ಪಿ. ತಳವಾರ ನಿರೂಪಿಸಿದರು ಎಸ್‌. ಬಿ. ಯರಗುದ್ರಿ ವಂದಿಸಿದರು. 


ಸುದ್ದಿ ಓದಿ