ಬಾಲ ಮುತ್ಯೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಇಂಡಿ: ಪಟ್ಟಣದ ಸಾಯಿ ಬಾಬಾ ದೇವಸ್ಥಾನದಲ್ಲಿ ಸಾಯಿ ಸಮಿತಿ ವತಿಯಿಂದ ದಸರಾ ಹಬ್ಬದ ದುರ್ಗಾಷ್ಟಮಿಯ ನಿಮಿತ್ಯ 101 ಬಾಲ ಮುತ್ಯೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ರವಿವಾರ ನಡೆಯಿತು.
ಉಪನ್ಯಾಸ ನೀಡಿ ಮಾತನಾಡಿದ ಸಾಯಿ ಸಮಿತಿಯ ಗಂಗಾ ಗಲಗಲಿ ದಸರಾ ಮಹತ್ವ ಕುರಿತು ಮಾತನಾಡಿ ದಸರಾ ಮಹಿಳಾ ಪ್ರಧಾನವಾಗಿದೆ. ಮಹಿಷನನ್ನು ಚಾಮುಂಡೆಶ್ವರಿ ಸಂಹರಿಸಿದರೆ, ದುರ್ಗಾ, ಚಂಡಿ ಕೂಡ ಆರಾಧ್ಯ ದೇವಿ ಯಾಗಿದ್ದಾರೆ ಎಂದರು.
ನವರಾತ್ರಿಯ ಸಂದರ್ಭ ನವದುರ್ಗೆಯರನ್ನು ಪೂಜಿಸುವದು ಕೂಡ ಮಹಿಳಾ ಪ್ರಾಧ್ಯಾನತೆಯ ಸಂಕೇತ ಎಂದರು.
ಅಧ್ಯಕ್ಷತೆವಹಿಸಿ ವಿಜಯಲಕ್ಷ್ಮೀ ದೇಸಾಯಿ ಮಾತನಾಡಿದರು.
ಹಿರಿಯ ಮಹಿಳಾ ನಾಗರಿಕರಾದ ಮಲ್ಲಮ್ಮ ಕಕ್ಕಳಮೇಲಿ, ಸುಭದ್ರಾ ಬಿರಾದಾರ, ಚನ್ನಮ್ಮ ಉಪ್ಪಿನ, ನೀಲಮ್ಮ ಪಟ್ಟಣಶೆಟ್ಟಿ, ಸರೋಜಿನಿ ಬಿರಾದಾರ ಇವರಿಗೆ ಬಾಗಿನ ಕೊಡುವ ಕೊಡುವ ಕಾರ್ಯಕ್ರಮ ನಡೆಯಿತು.