ಜುಗೂಳ ಕೆಎಸ್ಎಸ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ;
ಕಾಗವಾಡ 26: ಉಳಾಗಡ್ಡಿ ತೊಗೋರಿ..! ಬಳ್ಳೋಳ್ಳಿ ತಗೋರಿ, ಮೆನಸಿನ ಕಾಯಿ ಸ್ವಸ್ಥ ಅದಾವು ಬರ್ರಿ..! ಇಡ್ಲಿ ತಿನ್ನರಿ, ವಡಪಾವ ತಗೋರಿ..!! ಕಾಯಿಪಲ್ಲೆ ತಗೋರಿ ಬರ್ರಿ ಬರ್ರಿ. ಈ ರೀತಿಯ ದೃಷ್ಯ ಜುಗೂಳ ಕೆಎಸ್ಎಸ್ ಪ್ರಾಥಮಿಕ ಶಾಲೆಯಲ್ಲಿ ಇಂದು ಕಂಡು ಬಂದಿತು.
ಹೌದು ವೀಕ್ಷಕರೆ, ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ದಿ. 26 ರಂದು ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು. ಮಕ್ಕಳು ಸಂತೆಯಲ್ಲಿ ಉತ್ಸಾಹದಲ್ಲಿ ಪಾಲ್ಗೊಂಡು, ಕಾಯಿಪಲ್ಲೆ ಮಾರಾಟ ಮಾಡಿ, ಸಂಭ್ರಮಿಸಿದರು. ಮಕ್ಕಳಿಗೆ ವ್ಯವಹಾರಿಕ ಜ್ಞಾನದ ವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿದ್ದು, ಮಕ್ಕಳು ಅನೇಕ ಬಗೆಯ ಕಾಯಿಪಲ್ಲೆ, ಉಳಾಗಡ್ಡಿ, ಬಳ್ಳೋಳ್ಳಿ, ಪಾನಿಪುರಿ, ಭೇಳ ಪುರಿ, ವಡಾಪಾವ, ಇಡ್ಲಿ-ವಡಾ, ಪಪ್ಪಾಯಿ ಹಣ್ಣು ಮಾರಾಟ ಮಾಡಿ, ಸಂಭ್ರಮಿಸಿದರು. ಇನ್ನೂ ಮಕ್ಕಳ ಪಾಲಕರು ತಮ್ಮ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು, ಮಕ್ಕಳಿಂದ ಕಾಯಿಪಲ್ಲೆ ಖರೀದಿ ಮಾಡಿ, ಪ್ರೋತ್ಸಾಹಿಸಿದರು.
ಒಟ್ಟಿನಲ್ಲಿ ಜುಗೂಳ ಕೆಎಸ್ಎಸ್ ಪ್ರೌಢ ಶಾಲೆಯು ಗ್ರಾಮದ ವಾರದ ಸಂತೆಯನ್ನು ನೆನಪಿಸುವಂತಾಯಿತು. ಈ ಸಮಯದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಪಾಲಕರು ಉಪಸ್ಥಿರಿದ್ದರು.