ಬನ್ನೂರಿನಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ
ಶಿಗ್ಗಾವಿ 22: ತಾಲೂಕಿನ ಬನ್ನೂರಗ್ರಾಮ ಪಂಚಾಯತಿಯಲ್ಲಿ 2024 ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ ಉದ್ಘಾಟಿಸಿದರು. ಗ್ರಾಮಪಂಚಾಯತಿ ಅಧ್ಯಕ್ಷೆ ಗಿರಿಜಮ್ಮ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಸಹಾಯಕ ನಿರ್ದೇಶಕ ಪಂಚಾಯತ ರಾಜ್ಯ ಪ್ರಕಾಶ ಓಂಧಕರ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇಣಮ್ಮ ಬಿ. ಶೆಟ್ಟಿ, ಸದಸ್ಯರಾದ ವೀರಭದ್ರ್ಪ ಅಗಡಿ, ನಿಂಗಪ್ಪ ದುಂಡಪ್ಪನವರ, ಮುನಿರಹ್ಮದ ಸೇತಸನ್ನದಿ, ಸರಕಾರಿ ಪ್ರೌಡಶಾಲೆ ಮುಖ್ಯೋಪಾಧ್ಯಾಯ ಬಿ. ಶ್ರೀನಿವಾಸ, ಎಸ್.ಡಿ.ಎಂ.ಸಿ ಅಧ್ಯಕ್ಷ ಧರ್ಮಗೌಡ ದುಂಡಿಗೌಡ್ರ, ಗ್ರಾಮದ ಹಿರಿಯ ಠಾಕನಗೌಡ ಪಾಟೀಲ, ಸಿದ್ದನಗೌಡ ಪೋಲಿಸಗೌಡ್ರ, ಪಿ.ಎಸ್.ಯಲಿಗಾರ, ನಾಗರಾಜ ದ್ಯಾಮನಕೊಪ್ಪ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಸಿ.ಆರ್.ಸಿ ಬಿ.ಆರ್.ಸಿ ಹಾಗೂ ಜ್ಞಾನ ವಿಜ್ಞಾನ ಸಮಿತಿಯಜಿಲ್ಲಾ ಸದಸ್ಯರು ಹಾಗೂ ಬನ್ನೂರ, ಕಬನೂರ, ಹಿರೇಮಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ಮಕ್ಕಳು ಉಪಸ್ಥಿತರಿದ್ದರು.