ಬೈಲಹೊಂಗಲ

ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

ಲೋಕದರ್ಶನ ವರದಿ 


ಬೈಲಹೊಂಗಲ 16: ಪಟ್ಟಣದ ಹೊಸೂರ ರಸ್ತೆಯ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿ ಮಕ್ಕಳ ದಿನಾಚಾರಣೆಯನ್ನು ವಿಶಿಷ್ಟವಾಗಿ ಆಚರಿಸಿದರು. 

   10 ತರಗತಿಯ ವಿದ್ಯಾರ್ಥಿಗಳು ಪಂಡಿತ ಜವಾಹಾರ ಲಾಲ ನೆಹರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಕೇಕ್‌್ ಕತ್ತರಿಸಿದರು. ಮುದ್ದು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕುಣಿದು ಕುಪ್ಪಳಿಸಿದರು. ತಾವೇ ಅತಿಥಿಗಳಾಗಿ ಭಾಷಣ ಮಾಡಿದರು. ಬಹುಮಾನ ವಿತರಣೆ ಕೂಡ ಅಚ್ಚುಕಟ್ಟಾಗಿ ನೆರವೇರಿಸಿದರು. 

   ವಿದ್ಯಾರ್ಥಿ ಪ್ರತಿನಿಧಿಗಳಾದ  ಶೋಭಾ ಮೇಟಿ, ಬೀಮ್ಮವ್ವ ಶೇರೆಗಾರ, ರುಕ್ಮಿಣಿ ಹುಣಸೀಮರದ, ಶಿಲ್ಪಾ ಕುರುಬರ, ಲಕ್ಷ್ಮೀ ಕಳ್ಳಿ, ಸಾವಿತ್ರಿ ನಾಗನಗೌಡರ, ನಿಧಾ ಗುರ್ಲಹೊಸೂರ, ಗೀತಾ ಜ್ಯೋತಿ ಇತರರು ಇದ್ದರು 

 ನೇತ್ರಾ ದೊಡವಾಡ ನಿರೂಪಿಸಿ ವಂದಿಸಿದರು. ಮುಖ್ಯೋಪಾದ್ಯಾಯ ಎಂ.ವಿ. ನಾಗನೂರ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮಕ್ಕಳ ದಿನಾಚರಣೆ ಯಶಸ್ವಿಯಾಗಿ ನಡೆಯಿತು. 


ಸುದ್ದಿ ಓದಿ