ಸಿರುಗುಪ್ಪ

ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ಬೆಳೆಯಲಿ ಭಾವನಾತ್ಮಕ ತಾಕತ್ತು: ಅಬ್ದುಲ್ ನಬಿ

ಮಕ್ಕಳ ದಿನಾಚರಣೆ : ಮಕ್ಕಳಲ್ಲಿ ಬೆಳೆಯಲಿ ಭಾವನಾತ್ಮಕ ತಾಕತ್ತು: ಅಬ್ದುಲ್ ನಬಿ
ಪಂಡಿತ್ ಜವಹರ್ ಲಾಲ್ ನೆಹರು ಅವರ  ಜನ್ಮದಿನ
ಸಿರುಗುಪ್ಪ -ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವನ ಪ್ರಗತಿ ಅಚ್ಚರಿ ಮೂಡಿಸುತ್ತಿದೆ ತಂತ್ರಜ್ಞಾನದ ಪ್ರಗತಿಯಿಂದ ಅವಘಡಗಳು ಹೆಚ್ಚುತ್ತಿವೆ. ಮನುಷ್ಯ ಸಂಬಂಧಗಳು ಘಾಸಿ ಗೊಳ್ಳುತ್ತಿವೆ. ಮಾನವೀಯ ಮೌಲ್ಯಗಳು ಮರೆ ಯಾಗುತ್ತಿವೆ, ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಲು ಸವಾಲುಗಳು ಎದುರಾಗಿವೆ. ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವ ಸಂಸ್ಕೃತಿ ಸಂಸ್ಕಾರ ಮೈಗೂಡಿಸುವ ಪ್ರೀತಿ ವಾತ್ಸಲ್ಯಗಳನ್ನು ಹೃದಯದಲ್ಲಿ ತುಂಬಬೇಕು ಎಂದು ದೇಶಪ್ರೇಮಿ ಶಿಕ್ಷಣ ಪ್ರೇಮಿ ಸಾಮಾಜಿಕ ಸುಧಾರಕ ಸಾಕ್ಷರತಾ ಜಿಲ್ಲಾ ಸದಸ್ಯ ಎ ಅಬ್ದುಲ್ ನಬಿ ಅವರು ಹೇಳಿದರು.
ನಗರದ ಇಬ್ರಾಹಿಂ ಮಂಜಿಲ್ ನಲ್ಲಿ  ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಹರ್ ಲಾಲ್ ನೆಹರೂ ಅವರ  134ನೇ  ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಕ್ಕಳ ದಿನವನ್ನಾಗಿ  ಆಚರಣೆಯಲ್ಲಿ ಅವರು ಮಾತನಾಡುತ್ತಾ ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಮಕ್ಕಳನ್ನು ಅಪಾರ ಪ್ರೀತಿ ಅತ್ಯಂತ ಸಂತೋಷದಿಂದ ಗುಲಾಬಿ ಹೂವು ನೀಡಿ  ಮಕ್ಕಳೆಲ್ಲರೂ ಅವರಿಗೆ ಚಾಚಾ ನೆಹರೂ ಎಂದು ಉತ್ಸಾಹದಿಂದ      ಕಾಣುತ್ತಿದ್ದರು. ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಇರಿಸಬೇಕು, ಏನೇ ಕಷ್ಟ ಬಂದರೂ ಅದು ಜೀವನದ ಅಂತ್ಯವಲ್ಲ ಜೀವನದ ಆರಂಭ ಮಕ್ಕಳ ಜತೆ ಮಕ್ಕಳನ್ನು ಆಟವಾಡಲು ಉತ್ತೇಜಿಸಬೇಕು. ನಗು ಸಂಗೀತ ನೃತ್ಯ ಆಟ ಪಾಠ ಗುಂಪು ಆಟಕ್ಕೆ ಪ್ರೋತ್ಸಾಹಿಸಬೇಕು ಎಂದು ಅಬ್ದುಲ್ ನಬಿ ಹೇಳಿದರು .

ಸುದ್ದಿ ಓದಿ