ಮಕ್ಕಳ ಪಾಲನೆ, ಪೋಷಣೆ ಪುಣ್ಯದ ಕಾರ್ಯ: ಪರಶುರಾಮ ಪೂಜಾರ
ರಾಣೇಬೆನ್ನೂರ ಆಗಸ್ಟ್ 11: ಮಕ್ಕಳ ಪಾಲನೆ ಪೋಷಣೆ ಮಾಡುವುದು ಪುಣ್ಯದ ಕೆಲಸ ಎಂದು ರಾಣೇಬೆನ್ನೂರ ತಾಲೂಕ ಪಂಚಾಯತಿ ಸಹಾಯಕ ನಿರ್ದೇಶಕರಾದ ಪರಶುರಾಮ ಪೂಜಾರ ರವರು ಹೇಳಿದರು.
ಅವರು ನಗರದ ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕ ಪಂಚಾಯತ್ ರಾಣೇಬೆನ್ನೂರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಶು ಪಾಲನಾ ಕೇಂದ್ರದ ಆರೈಕೆದಾರರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತ ಶಿಶು ಪಾಲನಾ ಕೇಂದ್ರಗಳನ್ನು ಪ್ರಥಮ ಹಂತದಲ್ಲಿ ತಾಲೂಕಿನ ಹರನಗಿರಿ, ಸೋಮಲಾಪುರ, ರಾಹುತನಕಟ್ಟಿ, ಉಕ್ಕುಂದ, ಬಿಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು ಕೇಂದ್ರಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲು ಅರ್ಹ ಆರೈಕೆದಾರರನ್ನು ಗುರುತಿಸಿ ಅವರನ್ನು ತರಬೇತಿ ನೀಡಿಲಾಗುತ್ತಿದೆ ಎಂದರು. ನರೇಗಾ ಕೂಲಿ ಕಾರ್ಮಿಕರು ತರಬೇತಿಯ ಸದುಪಯೋಗ ಪಡೆದುಕೊಂಡು ಆರೈಕೆದಾರರು ತಮ್ಮ ಮಕ್ಕಳಂತೆ ಕೇಂದ್ರಕ್ಕೆ ಬರುವ ಮಕ್ಕಳನ್ನು ಲಾಲಾನೆ ಪಾಲನೆ ಮಾಡಬೇಕೆಂದು ಸೂಚಿಸಿದರು.
ಕಾರ್ಯಾಗಾರದಲ್ಲಿ ರಟ್ಟೀಹಳ್ಳಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಯ ಆರೈಕೆದಾರರು ಹಾಗೂ ತಾಲೂಕಿನ ಐದು ಗ್ರಾಮ ಪಂಚಾಯ್ತಿ ಸೇರಿ ಒಟ್ಟು 9 ಗ್ರಾಮ ಪಂಚಾಯತಿಯ 72 ಜನರು ಭಾಗವಹಿಸಿದ್ದರು.ವೇದಿಕೆಯಲ್ಲಿ ತಾಲೂಕ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ, ತಾಲೂಕ ಸಹಾಯಕ ನಿರ್ದೇಶಕ ಡಿ. ಡಿ. ಗೊಂದಿ, ತಾಲೂಕ ಲೆಕ್ಕಾಧಿಕಾರಿ ಬಸವರಾಜ್ ಸಿಡೆನೂರ್, ನರೇಗಾ ಸಂಚಾಲಕ ಮಾಲತೇಶ್ ಮಡಿವಾಳರ, ಪಿ. ಡಿ. ಓ ಗಳಾದ ನಿಂಗರಾಜ್ ಲೆಕ್ಕಿಕೋನಿ, ಮಂಜುನಾಥ್ ಕೆ, ಕೆ. ಸಿ. ಅಜ್ಜೆವಡಿ ಮಠ್,ತಾಲೂಕ ಐ ಈ ಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ಡಿ. ವಿ. ಅಂಗೂರ, ಬಿ ಎಫ್ ಟಿ ಗಳಾದ ಪ್ರಕಾಶ್ ನಾಯಕರ, ಕಾಂತೇಶ್ ಐರಣಿ, ಪುಟ್ಟಪ್ಪ ಒಡೆಯರ, ಶ್ರೀನಿವಾಸ್ ಕೊಣ್ಣೂರ್, ನಾಗಪ್ಪ ಪಾರ್ವತೆರ್, ಚಂದ್ರಶೇಖರ್ ಮಠದ ಮತ್ತಿತರರು ಉಪಸ್ಥಿತರಿದ್ದರು.