ಕಬ್ಬಿನ ತೂಕದಲ್ಲಿ ಮೋಸ: ಅಧಿಕಾರಿಗಳು ಪರೀಶೀಲನೆ ಮಾಡುವಂತೆ ಆಗ್ರಹ
ಇಂಡಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖರಾಗಿ ತೂಕದ ಬಗ್ಗೆ ಪರೀಶೀಲನೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ರೈತರು ಸಾಕಷ್ಟು ಬಾರಿ ಹೋರಾಟ ಮಾಡಿದ್ದಾರೆ. ಆದರೆ ತೂಕ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ರೈತಾಪಿ ವರ್ಗ ವರ್ಷದವರೆಗೆ ಕಬ್ಬು ಬೆಳೆಯಲು ಸಾಕಷ್ಟು ಶ್ರಮಪಟ್ಟಿರುತ್ತಾರೆ. ಆದರೆ ಅವರಿಗೆ ತೂಕದಲ್ಲಿ ಮೋಸ, ಉತ್ತಮ ದರ ನೀಡದೆ ಇರುವುದು ಮಾಡುತ್ತಿರುವುದರಿಂದ ರೈತರು ಕಬ್ಬು ಬೆಳೆ ಬೆಳೆಯಲು ನಿರಾಶಾದಾಯಕ ಭಾವನೆಗೆ ಬರುತ್ತಿದ್ದಾರೆ ಎಂದರು.
ಅನೀಲಗೌಡ ಬಿರಾದಾರ, ಅಶೋಕ ಅಕಲಾದಿ, ಧರ್ಮರಾಜ ಮದರಖಂಡಿ, ಸಂತೋಶ ಬಂಡೇನವರ, ಬಾಳು ಮುಳಜಿ ಮತ್ತಿತರರು ಇದ್ದರು.