ಪೂರ್ಣಕುಂಭ ಕಳಸದೊಂದಿಗೆ ಚೌಡೇಶ್ವರಿ ದೇವಿ ಮೂರ್ತಿ ಮೆರವಣಿಗೆ
ಹೂವಿನಹಡಗಲಿ 045: ಪಟ್ಟಣದ ಗವಿಮಠದ ಬಳಿ ಗುರುವಾರ ಚೌಡೇಶ್ವರಿ ದೇವಿ ಪ್ರತಿಷ್ಠಾಪಿಸುವ ಮೂಲಕ ಚೌಡೇಶ್ವರಿ ದೇವಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಹೊಳಗುಂದಿ ರಸ್ತೆಯಲ್ಲಿರುವ ಶಿಲ್ಪಿ ಬಾವಿಹಳ್ಳಿ ಮೌನೇಶ ಅಚಾರ್ ಅವರ ಮನೆಯಲ್ಲಿ ಚೌಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಅಲಂಕೃತ ಟ್ರಾಕ್ಟರ್ನಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಭಕ್ತಿಭಾವದಿಂದ ಭಾಗವಹಿಸಿದ್ದರು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಗವಿಮಠದ ಬಳಿ ಹೂವಿನಹಡಗಲಿಯಲ್ಲಿ ದಸರಾ ಮಹೋತ್ಸವ ಅಂಗವಾಗಿ ಚೌಡೇಶ್ವರಿದೇವಿ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ನಿರ್ಮಿಸಿರುವ ಮಂಟಪದಲ್ಲಿ ಚೌಡೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ರಾಮಸ್ವಾಮಿ ಮಠದರಾಕೇಶಯ್ಯ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ವಿಜಯಕುಮಾರ ಪಾಟೀಲ್, ಕೋಡಿಹಳ್ಳಿ ಕೊಟ್ರೇಶ, ಚೌಡೇಶ್ವರಿ ದಸರಾ ಮಹೋತ್ಸವ ಸಮಿತಿಅಧ್ಯಕ್ಷ ಸೊಪ್ಪಿನ ವೀರೇಶ ಹಾಗಿ ಪದಾಧಿಕಾರಿಗಳು ಇದ್ದರು.ಒಂಬತ್ತು ದಿನಗಳ ಕಾಲ ಪ್ರತಿದಿ ಸಂಜೆ 7ರಿಂದ ನವದುರ್ಗೆಯರ ವೈಜ ಪ್ರದರ್ಶನ ನಡೆಯಲಿದೆ.