ಹಲಗೇರಿ ಠಾಣಾ ವ್ಯಾಪ್ತಿಯ ಪುರುಷನೋರ್ವನು ಕಾಣೆ
ರಾಣೇಬೆನ್ನೂರು 26: ತಾಲೂಕಿನ ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯ ಮೂಲತಃ ಬೆನಕನಕೊಂಡ ಗ್ರಾಮದವರಾದ ಚಂದ್ರಪ್ಪ ಹನುಮಂತಪ್ಪ ಬಿಸಲಹಳ್ಳಿ ಎಂಬಾತನು ಕಾಣೆಯಾಗಿದ್ದು ಅವರನ್ನು ಹುಡುಕಿ ಕೊಡುವಂತೆ, ಅವರ ಪತ್ನಿ ಅರುಣಾ ಕೋಂ ಚಂದ್ರಪ್ಪ ಬಿಸಲಹಳ್ಳಿ ಅವರು ದೂರು ದಾಖಲಿಸಿದ್ದಾರೆ. ತಾಲೂಕಿನ ಬೆನಕನಕೊಂಡ ಗ್ರಾಮದವರಾದ ಚಂದ್ರ್ಪ ಬಿಸಲಹಳ್ಳಿ ಅವರು, ಕಳೆದ 27-03-2024 ರಂದು, ಬೆಂಗಳೂರಿನಿಂದ, ತಮ್ಮ ಮೋಟರ್ ಸೈಕಲ್ ಮೇಲೆ, ಬೆನಕನಕೊಂಡ ಗ್ರಾಮಕ್ಕೆ ಹೋಗಿಬರುವುದಾಗಿ ಹೇಳಿ ಹೋದವರು ಇದುವರೆಗೆ ಸಿಕ್ಕಿರುವುದಿಲ್ಲ ಎಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಚಹರೆ ಪಟ್ಟಿ ಇಂತಿದೆ : ವಯಸ್ಸು42, ಉದ್ಯೋಗ ತರಕಾರಿ ವ್ಯಾಪಾರಿ. ಎತ್ತರ:5-5 ಸಾಧಾರಣ ಮೈಕಟ್ಟು. ಗೋದಿ ಮೈಬಣ್ಣ. ಕೋಲು ಮುಖ ಎಡಗೈರಟ್ಟಿಯ ಮೇಲೆ ಆಂಜನೇಯ ಸ್ವಾಮಿಯ ಟ್ಯಾಟೂ ಗುರುತು ಇದೆ. ಕನ್ನಡ ಹಿಂದಿ ಭಾಷೆ ಮಾತನಾಡುತ್ತಾರೆ. ತಿಳಿ ಗುಲಾಬಿ ಬಣ್ಣದ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು. ವ್ಯಕ್ತಿಯೂ ಕಂಡು ಬಂದಲ್ಲಿ ತಕ್ಷಣವೇ ಮಾಹಿತಿ ನೀಡಲು ಹಲಗೇರಿ ಠಾಣಾ ಪೊಲೀಸರು ಕೋರಿದ್ದಾರೆ.