ಚಂದ್ರಕಾಂತಗೆ ಜೀವ ವೈವಿಧ್ಯ ಪ್ರಶಸ್ತಿ
ಗುಳೇದಗುಡ್ಡ,ಆ.20: ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಮತ್ತು ಅದರಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಗುಳೇದಗುಡ್ಡದ ಚಂದ್ರಕಾಂತ ಶೇಖಾ ಅವರಿಗೆ ಜಿಲ್ಲಾ ಜೀವವೈವಿಧ್ಯ ಪ್ರಸಸ್ತಿ ದೊರಕಿದೆ.
ಈ ಪ್ರಶಸ್ತಿಯನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಜಿಲ್ಲಾ ಪಂಚಾಯತ್, ಬಾಗಲಕೋಟೆಯಿಂದ ಅಂತರಾಷ್ಟ್ರೀಯ ಜೀವ ವೈವಿಧ್ಯದ ಅಭಿಯಾನದ ಅಂಗವಾಗಿ ಕೊಡಮಾಡುವ ಜೀವ ವೈವಿಧ್ಯ ಪ್ರಶಸ್ತಿಯನ್ನು ಇತ್ತೀಚೆಗೆ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗುದ ಸರಳ ಸಮಾರಂಭದಲ್ಲಿ ಶೇಖಾ ಅವರಿಗೆ ಬಾಗಲಕೋಟೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಡಿಎಫ್ಓ ಸಂಕಿನಮಠ ನೀಡಿ ಗೌರವಿಸಲಾಯಿತು.