ಜಿಲ್ಲಾಧ್ಯಕ್ಷರಾಗಿ ಚಂದ್ರಗೌಡ ಪಾಟೀಲ ಮರುನೇಮಕ
ಸಿಂದಗಿ ನವೆಂಬರ್ 07: ತಾಲೂಕಿನ ಆಸಂಗಿಹಾಳ ರೈತ ಹೋರಾಟಗಾರ ಚಂದ್ರಗೌಡ ಜಿ. ಪಾಟೀಲ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮರು ನೇಮಕ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆದೇಶ ಹೊರಡಿಸಿದ್ದಾರೆ.
10 ವರ್ಷಗಳಿಂದ ಹಲವಾರು ರೈತಪರ ಹೋರಾಟಗಳನ್ನು ಮಾಡುತ್ತ ಸದಾ ರೈತ ಹಿತಕ್ಕಾಗಿ ಹಂಬಲಿಸುವ ಚಂದ್ರಗೌಡ ಪಾಟೀಲ ಹೋರಾಟ ಮನೋಭಾವದವರೆಂದು ಬಣ್ಣಸಿರುವ ಕೋಡಿಹಳ್ಳಿ ಚಂದ್ರಶೇಖರ ಜಾತಿ ಮತ ಪಂಥ ಭೇದವಿಲ್ಲದೆ ಯಾವುದೇ ಆಮೀಷಗೊಳಿಗಾಳಗಾಗದೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಸಂಘಟನೆಯ ಧ್ಯೇಯೋದ್ದೇಶಗಳ ಆಶಯದಂತೆ ಜವಾಬ್ದಾರಿ ನಿಭಾಯಿಸುವ ಹೊಣೆ ನಿರ್ವಹಿಸುವಂತೆ ತಿಳಿಸಿದ್ದಾರೆ.