ಇಂಡಿ

ಚಕ್ರವರ್ತಿ ಸೂಲಿಬೆಲೆ ವೈಜ್ಞಾನಿಕವಾಗಿ ಚರ್ಚೆ ಮಾಡಲ್ಲ: ಅಕ್ಷತಾ ಆರೋಪ

ಚಕ್ರವರ್ತಿ ಸೂಲಿಬೆಲೆ ವೈಜ್ಞಾನಿಕವಾಗಿ ಚರ್ಚೆ ಮಾಡಲ್ಲ: ಅಕ್ಷತಾ ಆರೋಪ

ಇಂಡಿ: ಚಕ್ರವರ್ತಿ ಸೂಲಿಬೆಲೆ ವೈಜ್ಞಾನಿಕವಾಗಿ ಚರ್ಚೆ ಮಾಡಲ್ಲ. ಸತೀಶ ಜಾರಕಿಹೊಳಿ ಅವರನ್ನು ಮನುವಾದಿಗಳು ಮಟ್ಟಹಾಕಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಲೈಂಗಿಕ ಅಲ್ಪಸಂಖ್ಯಾತೆ ಅಕ್ಷತಾ ಕೆ.ಸಿ ಆರೋಪಿಸಿದರು. 

ಅವರು ಶನಿವಾರ ಪಟ್ಟಣದಲ್ಲಿ ಪ.ಜಾತಿ, ಪ.ಪಂಗಡ ಮತ್ತು ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಮತ್ತು ಮಹಾನಾಯಕ ಬಿ.ಆರ್‌. ಅಂಬೇಡಕರ ಸಂಘದ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹೇಳಿಕೆಯನ್ನು ಬೆಂಬಲಿಸಿ ಮತ್ತು ಸೂಲಿಬೆಲೆಯವರು ನಾನೂ ಹಿಂದೂ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಹಿಂದೂ ಪದದ ಬಗ್ಗೆ ಚರ್ಚೆಗೆ ಆಹ್ವಾನಿಸಿದ್ದನ್ನು  ಖಂಡಿಸಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ವಿರೂಪಾಕ್ಷಯ್ಯ ಬಣಗಾರ ಅವರಿಗೆ ಮನವಿ ಸಲ್ಲಿಸಿದರು.  

ರಾಜಕೀಯವನ್ನು ಪ್ರಜಾಪ್ರಭುತ್ವದ ಆಶಯಗಳ ಮೇಲೆ, ಸಂವಿಧಾನದ ತತ್ವದ ಮೇಲೆ ಯಾರಾದೃಉ ಒಬ್ಬರು ಮಾಡುತ್ತಿದ್ದಾರೆ ಎಂದರೆ ಅದು ಸತೀಶ ಜಾರಕಿಹೊಳಿ ಅವರು ಮಾತ್ರ. ಅಂತಹವರನ್ನು ಮಟ್ಟ ಹಾಕುವ ದುರುದ್ದೇಶ ಇಟ್ಟುಕೊಂಡು ಮನೋವಾದಿಗಳು ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡರು. 

ಸತೀಶ ಜಾರಕಿಹೊಳಿ ಅವರು ಮನೆ-ಮನೆಗೆ ಡಾ. ಅಂಬೇಡ್ಕರ ಅವರ ತತ್ವಗಳನ್ನು, ಬಸವಣ್ಣನವರ ಆದರ್ಶಗಳನ್ನು ಮುಟ್ಟಿಸಲುವ ಕಾರ್ಯ ಮಾಡುತ್ತಿದ್ದಾರೆ. 

ವೈಜ್ಞಾನಿಕ ನೆಲೆಗಟ್ಟಿನ ತಳಹದಿಯ ಮೇಲೆ ಸತೀಶ ಜಾರಿಕೊಳಿ ಅಣ್ಣವರು ಮಾತನಾಡುತ್ತಾರೆ. ಸತೀಶ ಅಣ್ಣನವರೊಂದಿಗೆ ಸವಾಲ್ ಹಾಕುವುದಲ್ಲ. ಅಕ್ಷತಾ ಗೆ ಸವಾಲ್ ಹಾಕಿ ನೀವೆಲ್ಲೇ ಕರೆದರೂ ನಾನು ಚರ್ಚೆಗೆ ಬರಲು ಸಿಧ್ಧ. ನನ್ನನ್ನು ಚರ್ಚೆಗೆ ಕರೆಯಿರಿ ಸೂಲಿಬೆಲೆಯವರೇ ಎಂದು ಉಚ್ಚರಿಸಿದರು.  

ದಲಿತ ಮುಖಂಡ ಸೋಮಶೇಖರ ಮ್ಯಾಕೇರಿ ಮಾತನಾಡಿ, ಸತೀಶ ಜಾರಕಿಹೊಳಿಯವರ ತೇಜೋವಧೆ ಮಾಡಲಾಗುತ್ತಿದೆ. ಕೋಮುವಾದಿಗಳು ಮುಚ್ಚಿಟ್ಟಿದ್ದನ್ನು ಹೊರಹಾಕಿದ ಶಾಸಕ ಸತೀಶ ಜಾರಕಿಹೊಳಿ ಅವರ ಹೇಳಿಕೆಯ ಸತ್ಯ ಅರಗಿಸಿಕೊಳ್ಳಲಾಗದ ಮನುವಾದಿಗಳು ನಾಯಕನ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದರು. 

ದಲಿತ ಮುಖಂಡರಾದ ಸುರೇಶ ನಡಗಡ್ಡಿ, ಶಿವಾನಂದ ಮಾತನಾಡಿ, ಪಟ್ಟಭದ್ರ ಹಿತಾಸಕ್ತಿಗಳು ಅವರ ಸಾಮಾಜಿಕ ಕಾರ್ಯಗಳನ್ನು ಸಹಿಸದೇ ಶಾಸಕರ ತೇಜೋವಧೆ ಮಾಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳು ರಾಜ್ಯಾದಂತ ಪ್ರತಿಭಟನೆ ಮಾಡಲಿವೆ ಎಂದರು. 

ಮೊದಲು ಪ್ರತಿಭಟನೆ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನಿ ವಿಧಾನಸೌಧ ತಲುಪಿತು. 

ಪ್ರತಿಭಟನೆಯಲ್ಲಿ ಮಲ್ಲು ಮಡ್ಡಿಮನಿ, ಮಹಾನಾಯಕ ಬಿ.ಆರ್‌.ಅಂಬೇಡಕರ ಸಂಘ ಸಮಿತಿಯ ಜಿಲ್ಲಾ ಅಧ್ಯಕ್ಷ ಎಸ್‌.ಬಿ.ಕಟ್ಟಿಮನಿ, ತಾಲೂಕಾ ಅಧ್ಯಕ್ಷ ಶಶಿಕುಮಾರ ಹರಿಜನ, ಉಪಾಧ್ಯಕ್ಷ ವಿಕಾಶ ಗುಡುಮನಿ, ಶೇಖರ್ ಶಿವಶರಣ, ಅರವಿಂದ ಕಾಂಬಳೆ, ನಾಗೇಶ ತಳಕೇರಿ, ರಮೇಶ ನಿಂಬಾಳಕರ, ರೇವಣಸಿದ್ದ ಮಸಳಿ, ರೇವಪ್ಪ ಮಂದೇಲಿ, ರಾಮಚಂದ್ರ ದೊಡಮನಿ, ಅರ್ಜುನ ನಾಯ್ಕೋಡಿ, ರಾಜು ನಾಯ್ಕೋಡಿ, ಶಿವನಂದ ಮಾವಿನಳ್ಳಿ, ಬಾಬು ಗುಡಮಿ, ಪರಮೇಶ್ವರ ಇಂಗಳೇಶ್ವರ, ಶಶಿಕುಮಾರ ಹರಿಜನ, ಪರಶುರಾಮ ಕಾಂಬಳೆ, ಮಹಾದೇವ ಮೇಲಿನಮನಿ ಮತ್ತಿತರಿದ್ದರು.  



ಸುದ್ದಿ ಓದಿ