ಬೈಲಹೊಂಗಲ

ಶತಮಾನೋತ್ಸವ ಆಚರಿಸಿದ ಮರಕುಂಬಿ ಸಹಕಾರಿ ಸಂಘ ಪ್ರಮುಖ: ಮಹಾಂತೇಶ ಕೌಜಲಗಿ

ಶತಮಾನೋತ್ಸವ ಆಚರಿಸಿದ ಮರಕುಂಬಿ ಸಹಕಾರಿ ಸಂಘ ಪ್ರಮುಖ: ಮಹಾಂತೇಶ ಕೌಜಲಗಿ

ಬೈಲಹೊಂಗಲ: ಬೆಳಗಾವಿ ಜಿಲ್ಲೆಯಲ್ಲಿ ಬೆರೆಳೆಣಿಕೆಯಷ್ಟು ಸಹಕಾರಿ ಸಂಘಗಳು ಶತಮಾನೋತ್ಸವ ಆಚರಿಸಿವೆ. ಅದರಲ್ಲಿ ಮರಕುಂಬಿ ಗ್ರಾಮದ ಸಹಕಾರಿ ಸಂಘವು ಪ್ರಮುಖವಾಗಿರುವುದು ಅತ್ಯಂತ ಹೆಮ್ಮೆ, ಖುಷಿಯ ಸಂಗತಿಯಾಗಿದೆ' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

ಸಮೀಪದ ಮರಕುಂಬಿ ಗ್ರಾಮದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. 

'ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಾರಂಭವಾಗುವ ಪೂರ್ವದಲ್ಲಿಯೇ ಮರಕುಂಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಾರಂಭಗೊಂಡಿದೆ. ಈ ಸಂಘ ನೋಡಿಯೇ ಜಿಲ್ಲಾ ಸಹಕಾರಿ ಸಂಘ ನಿರ್ಮಾಣವಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಲ್ಲಿಂದ ಇಲ್ಲಿಯವರೆಗೆ ಸಂಘ ನಿರಂತರವಾಗಿ ಈ ಭಾಗದ ಜನರಿಗೆ ಸೇವೆ ಮಾಡಿಕೊಂಡು ಬಂದಿದೆ. ಸಂಘ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯ ಪಡೆದು ರೈತರಿಗೆ ತಲುಪಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಗುರಿ ಸಾಧನೆ ಮಾಡಬೇಕು' ಎಂದರು.  

ಸಂಘದ ಅಧ್ಯಕ್ಷ ಕಾರ್ತಿಕ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, 'ಸಂಘದಿಂದ ಈ ಭಾಗದ ರೈತರಿಗೆ ಹಣಕಾಸಿನ ನೆರುವು ಕಲ್ಪಿಸುವುದರ ಜೊತೆಗೆ ಜನರಿಗೆ ಅನುಕೂಲತೆ, ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಆಡಳಿತ ಮಂಡಳಿ ಸದಸ್ಯರು, ಗ್ರಾಹಕ ಸದಸ್ಯರು ಸಂಘಕ್ಕೆ ತಮ್ಮದೆ ಕೊಡುಗೆ ನೀಡಿ ಶತಮಾನೋತ್ಸವ ಆಚರಿಸಲು ಕಾರಣರಾಗಿದ್ದಾರೆ. ಬರುವ ದಿನಗಳಲ್ಲಿ ಈ ಭಾಗದ ಜನರ ಸೇವೆ ಸಲ್ಲಿಸಲು ಇನ್ನೂ ಹೆಚ್ಚಿನ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ' ಅವರು ತಿಳಿಸಿದರು.  

ಮುರಗೋಡ ನೀಲಕಂಠ ಸ್ವಾಮೀಜಿ, ಅಂಕಲಗಿ ಗುರುಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವದಿಸಿದರು. ಗ್ರಾಮದ ಹಿರಿಯ ಮಡಿವಾಳಪ್ಪ ಭಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದೇಮನಗೌಡರ, ಮುರಗೋಡ ಪಿಕೆಪಿಎಸ್ ಅಧ್ಯಕ್ಷೆ ಗೀತಾತಾಯಿ ದೇಸಾಯಿ, ಡಾ.ಅಜಿತ ದೇಸಾಯಿ, ಯುವ ಮುಖಂಡ ನವೀನ ಪಾಟೀಲ, ಸವದತ್ತಿ ಕೃಷಿ ಅಧಿಕಾರಿ ಶಿವಪ್ರಕಾಶ ಹಿರೇಮಠ, ಮುರಗೋಡ ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ ವೇದಿಕೆಯಲ್ಲಿ ಇದ್ದರು. ಮುಖ್ಯಕಾರ್ಯನಿವಾರ್ಹಕ ವಿಶ್ವನಾಥ ಮಠಪತಿ ಸ್ವಾಗತಿಸಿದರು. ನಿರ್ದೇಶಕರಾದ ಸುರೇಶ ಮುರಗೋಡ, ಮಲ್ಲಿಕಾರ್ಜುನ ಗುರಕನವರ, ಮಲ್ಲಿಕಾರ್ಜುನ ಬೈಲವಾಡ, ಶಿವಕುಮಾರ ಮಡೆನ್ನವರ, ನಾಮದೇವ ಶಿಂಗನ್ನವರ, ಸಂಗಪ್ಪ ಚಿನಗುಢಿ, ಸುಶೀಲಾ ಬೋಳೆತ್ತಿನ, ಬಾಳಪ್ಪ ಹೊಳಿ, ಸಿದ್ದರಾಮಪ್ಪ ಹೋಲೆರ, ಪ್ರವೀಣ ಕೋಟಗಿ, ಗ್ರಾಮಸ್ಥರು, ಅನೇಕರು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು. 


ಸುದ್ದಿ ಓದಿ