ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಣೆ

ಹುಬ್ಬಳ್ಳಿಯಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಣೆ

ಹುಬ್ಬಳ್ಳಿ 17:  ದಿ.17ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ವಿಶ್ವಕರ್ಮರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವುದರ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.  

ವಿಶ್ವಕರ್ಮರ ಕುರಿತು ಮಾತನಾಡಿದ ವಿವೇಕಾನಂದ ವಿಶ್ವಜ್ಞ ಮುಖ್ಯ ಸಂಚಾರ ವ್ಯವಸ್ಥಾಪಕರವರು, ಇಡೀ ಸೃಷ್ಟಿಯನ್ನು ಕಲಾತ್ಮಕವಾಗಿ ನಿರ್ಮಿಸುವಲ್ಲಿ ವಿಶ್ವಕರ್ಮರ ಪಾತ್ರ ವಿಶಿಷ್ಟವಾಗಿದೆ ಎಂದು ಹೇಳಿದರು ಮತ್ತು ಪಿ ವೈ ನಾಯಕ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳು ವಿಶ್ವಕರ್ಮ ರವರ ಕುರಿತು ಮಾತನಾಡಿದರು.  

ಕಾರ್ಯಕ್ರಮದಲ್ಲಿ ವಿಜಯಶ್ರೀ ನರಗುಂದ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಎಸ್ ಎಸ್ ಮಾಲತಿ ಮಂಡಳಿ ಕಾರ್ಯದರ್ಶಿಗಳು, ಜಿ ವಿಜಯಕುಮಾರ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು, ಜಗದಂಬಾ ಕೋಪರ್ಡೆ, ಮುಖ್ಯ ಲೆಕ್ಕಾಧಿಕಾರಿ,  ಬಿ ಬೋರಯ್ಯಾ, ಮುಖ್ಯ ಯೋಜನಾ ಮತ್ತು ಅಂಕಿಸಂಖ್ಯಾಧಿಕಾರಿಗಳು, ಶ್ರೀನಾಥ ಜಿ. ಉಪ ಮುಖ್ಯ ಗಣಕ ವ್ಯವಸ್ಥಾಕರು, ಎಂ ಬಿ ಕಪಲಿ ಗಣಕ ವ್ಯವಸ್ಥಾಪಕರು, ಹಾಗೂ ಇನ್ನಿತರ ಅಧಿಕಾರಗಳು/ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರುಪಾಕ್ಷ ಕಟ್ಟಿಮನಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ