ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ
ರಾಣಿಬೆನ್ನೂರ 24: ನಗರದ ಮಿನಿವಿಧಾನ ಸೌಧದ ಸಭಾಭವನದಲ್ಲಿ ಸೋಮವಾರ ತಾಲೂಕಾ ಆಡಳಿತ ಮತ್ತು ಗಂಗಾಮತ ಸಮಾಜ ಸೇವಾ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರಿ್ಡಸಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ ಹನುಮಂತಪ್ಪ ಶಿರಹಟ್ಟಿ, ಗಂಗಾಮತ ಸಮಾಜದ ಮುಖಂಡರಾದ ರಾಜು ರಟ್ಟಿಹಳ್ಳಿ, ಆರ್.ಎಚ್. ಐರಣಿ, ರಾಜು ಜಾಡಮಾಲಿ, ಹೊನ್ನಪ್ಪ ತಿಮ್ಮೇನಹಳ್ಳಿ, ರಾಮಪ್ಪ ಬೆಂಕಿ, ಕೊಟ್ರೇಶಪ್ಪ ಉದಗಟ್ಟಿ, ಕಂದಾಯ ನೀರೀಕ್ಷಕ ಮಂಜುನಾಥ ಕೆಂಚರಡ್ಡಿ ಸೇರಿದಂತೆ ಸಮಾಜದ ಮುಂಖಂಡರು ಮತ್ತು ಅಧಿಕಾರಿಗಳು ಇದ್ದರು.