ತಾಲ್ಲೂಕು ಆಡಳಿತದಿಂದ ಸೇವಾಲಾಲ್ ಜಯಂತಿ ಆಚರಣೆ
ಹೊಸಪೇಟೆ(ವಿಜಯನಗರ),ಫೆ.15: ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಸಂತ ಶ್ರೀ ಸೇವಾಲಾಲ್ ಅವರ 284ನೇ ಜಯಂತಿ ಆಚರಣೆಯನ್ನು ಕೈಗೊಳ್ಳಲಾಯಿತು.
ತಾಲ್ಲೂಕು ಕಚೇರಿಯ ಆವರಣದಲ್ಲಿ ವಿಜಯನಗರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಹಾಗೂ ಅಪರ ಜಿಲ್ಲಾಧಿಕಾರಿ ಅನುರಾಧ ಕೆ. ಅವರು ಸೇವಾಲಾಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ನೆರವೇರಿಸಿದರು. ತ ಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಶಿರಸ್ತೆದಾರ್ ಶ್ರೀಧರ್ ಹಾಗೂ ಕಂದಾಯ ನೀರೀಕ್ಷಕ ಜಿ.ಮಲ್ಲಿಕಾರ್ಜುನ ಗೌಡ ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿ ಭಾಗಿಯಾಗಿದ್ದರು.