ಮಹಾತ್ಮಾ ಜ್ಯೋತಿಬಾ ಫುಲೆ ಜಯಂತಿ ಆಚರಣೆ
ಅಥಣಿ 11: ಶೋಷಣೆಗೆ ಒಳಗಾದ ವ್ಯಕ್ತಿಗಳು ಕೂಡ ಓದಿ ಜ್ಞಾನ ಸಂಪಾದಿಸಿದರೆ ಯಾರಿಗೂ ತಲೆ ಬಾಗ ಬೇಕಿಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮಾ ಜ್ಯೋತಿಬಾ ಫುಲೆ ಎಂದು ಮಾಳಿ, ಮಾಲಗಾರ ಸಮಾಜದ ಹಿರಿಯ ಮುಖಂಡ ಸದಾಶಿವ ಬುಟಾಳಿ ಅವರು ಹೇಳಿದರು.ಅವರು ಸ್ಥಳೀಯ ಮಾಹತ್ಮಾ ಜ್ಯೋತಿಬಾಫುಲೆ ವೃತ್ತದಲ್ಲಿ ಅಥಣಿ ತಾಲೂಕಾ ಮಾಳಿ, ಮಾಲಗಾರ ಸಮಾಜದ ವತಿಯಿಂದ ಹಮ್ಮಿಕೊಂಡ ಫುಲೆ ಅವರ 194 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರ ಪೂಜೆ ಮಾಡಿ ಮಾತನಾಡುತ್ತಾ ತಮ್ಮ ಅನಕ್ಷರಸ್ತ ಹೆಂಡತಿಯಾದ ಸಾವಿತ್ರಿಬಾಯಿ ಫುಲೆ ಅವರಿಗೆ ವಿದ್ಯಾಭ್ಯಾಸ ಹೇಳಿ ಕೊಟ್ಟು ಆವಳು ಬೇರೆಯವರಿಗೆ ವಿದ್ಯೆ ಹೇಳಿ ಕೊಡುವಂತೆ ಮಾಡಿ ಅವರನ್ನು ಮೊದಲ ಆಧುನಿಕ ಭಾರತದ ಪ್ರಪ್ರಥಮ ಶಿಕ್ಷಕಿಯನ್ನಾಗಿ ಮಾಡಿದರು ಎಂದರು.
ಅನಂತರ ಮಾತನಾಡಿದ ಮಾಳಿ, ಮಾಲಗಾರ ಸಮಾಜದ ಹಿರಿಯ ಮುಖಂಡ ಗಿರೀಶ ಬುಟಾಳಿ ಬ್ರಿಟಿಷ್ ಕಾಲದಲ್ಲಿ ಅವರು ವಿದ್ಯೆಗೆ ಕೊಡುತ್ತಿದ್ದ ಪ್ರಾಮುಖ್ಯತೆಗೆ ಪ್ರೇರಿತರಾಗಿ ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸುವ ಪಣ ತೊಟ್ಟ ಧೀಮಂತ ಮಹಾತ್ಮಾ ಫುಲೆ ಅವರು, ಇವರು ಮುಂದೆ ಒಬ್ಬ ಒಳ್ಳೆ ಶಿಕ್ಷಕ, ಬರಹಗಾರ, ಹೋರಾಟಗಾರ, ವಿಧವಾ ವಿವಾಹ ಮತ್ತು ಅವರ ಮಕ್ಕಳಿಗೆ ಶಿಕ್ಷಣ, ಸಮಾಜ ಸುಧಾರಕ ಕೆಲಸ, ಕ್ರಾಂತಿಕಾರಿ ನೀತಿ, ಜಮೀನ್ದಾರಿ ಪದ್ಧತಿ ವಿರೋಧಿಸಿ ರೈತಪರ ಹೋರಾಟಗಾರರಾಗಿ ಇವೆಲ್ಲದರ ಜೊತೆ ಒಬ್ಬ ಒಳ್ಳೆಯ ಯಶಸ್ವಿ ವ್ಯಾಪಾರಸ್ಥರೂ ಆದರು ಎಂದರು.
ಮಾಳಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹಣಮಂತ ಭಾಸಿಂಗಿ ಮಾತನಾಡುತ್ತಾ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಇವರೇ ಸ್ಫೂರ್ತಿ, ಇಂಥ ಕ್ರಾಂತಿಕಾರಿಗಳು ಭಾರತವನ್ನು ತನ್ನ ಗೊಡ್ಡು ಜಾಡ್ಯದಿಂದ ಮುಕ್ತ ಮಾಡುವಲ್ಲಿ ಬಹಳ ಕೊಡುಗೆ ನೀಡಿದ್ದಾರೆ ಎಂದರು. ಅನಂತರದಲ್ಲಿ ಮಾಳಿ, ಮಾಲಗಾರ ಸಮಾಜದ ಮುಖಂಡರಾದ ಶ್ರೀಶೈಲ ಹಳ್ಳದಮಳ, ಸಂತೋಷ ಬಡಕಂಬಿ, ಮಹಾಂತೇಶ ಮಾಳಿ ಮಾತನಾಡಿದರು.ನಂತರ ಸುಮಾರು 200 ಜನ ಯುವಕರು ಸೇರಿ ಅಥಣಿ ನಗರದಾದ್ಯಂತ ಜ್ಯೋತಿಬಾಫುಲೆ ಅವರ ಜಯಘೋಷಗಳೊಂದಿಗೆ ಬೈಕ್ ರ್ಯಾಲಿ ಮಾಡಿದರು.
ರವಿ ಬಡಕಂಬಿ, ಪ್ರಶಾಂತ ತೋಡಕರ, ಪರಶುರಾಮ ಸೋನಕರ, ನರಸು ಬಡಕಂಬಿ, ಬಸವರಾಜ ಹಳ್ಳದಮಳ, ಮಲ್ಲಿಕಾರ್ಜುನ ಪ್ಯಾಟಿ, ರವಿ ಭಾಸಿಂಗಿ, ನಾಗಪ್ಪಾ ಉಗಾರೆ, ಸುಭಾಸ ಕಾಗಲೆ, ಪ್ರಸಾದ ರೆಡ್ಡಿ, ಶಿವಪ್ಪ ಹಲವೆಗಾರ, ಅರುಣ ಮಾಳಿ, ಅನೀಲ ತೆವರಟ್ಟಿ, ರಾಮಲಿಂಗ ಬಡಕಂಬಿ, ಕೇದಾರಿ ಬಡಕಂಬಿ, ಪುನೀತ ಬಡಕಂಬಿ, ಮಂಜುನಾಥ ಮಾಳಿ, ಸಚಿನ ಬಡಕಂಬಿ, ಸಚಿನ ಬುಟಾಳಿ, ಮುರುಗೇಶ ಮೋಳೆ, ಪರಶುರಾಮ ಭಂಗಿ. ಸಾಗರ ಬುಟಾಳಿ, ಮುರುಗೇಶ ಬಡಕಂಬಿ, ಸಂತೋಷ ಕಿವಡಿ, ಶ್ರೀಶೈಲ ಕಿವಡಿ, ಶಂಭು ತೇರದಾಳ, ಶ್ರೀಕಾಂತ ಬಡಕಂಬಿ, ಬಾಳೇಶ ಬಿಳ್ಳೂರ್, ಅನೀಲ ಮಾಳಿ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.