ಜಮಖಂಡಿ

ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಲೋಕದರ್ಶನ ವರದಿ,

ಜಮಖಂಡಿ2:ನಗರದ ಹೊಕ್ಕಲ್ಬಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಡಿಎಸ್ಪಿ, ಶಾಂತವೀರ ಈ ಅವರು ಡಾ, ರಾಜಕುಮಾರ ಅವರ ಚಲನಚಿತ್ರದ ಮೈಯೂರ ಚಿತ್ರದ ಅಭಿನಯ ಮಾಡುವ ಮೂಲಕ ಡಾ.ರಾಜ ಅವರ ಡೈಲಾಗ್ ಹೊಡೆದು ಕನ್ನಡ ಸಂಘದ ವೇದಿಕೆಯನ್ನು ಧೂಳ ಎಬ್ಬಿಸಿದ ಡಿಎಸ್ಪಿ.

ಶಾಸಕ ಜಗದೀಶ ಗುಡಗುಂಟಿ ಕನ್ನಡಾಂಭೆ ಭೂವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲಿಸಿ. ಕನ್ನಡದ ಧ್ವಜಾರೋಹನ ನೇರವೆರಿಸಿ ಮಾತನಾಡಿದರು. ಇಂದಿನ ದಿನಮಾನದಲ್ಲಿ ಸಂಶೋಧನೆ, ಸಾಹಿತ್ಯಗಳು ಹುಟ್ಟಿಕೊಳ್ಳವು ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ. ಬೆಳಸಬೇಕು. ಜಮಖಂಡಿ ಕನ್ನಡ ಸಂಘವು ಹುಟ್ಟಿ 56 ವರ್ಷಗಳ ಕಾಲ ಪೊರೈಯಿಸಿದೆ. ಶ್ರದ್ಧೆ, ಭಕ್ತಿಯಿಂದ ಕನ್ನಡ ಸಂಘವನ್ನು ಕಟ್ಟಿದ್ದಾರೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ಮೊದಲು ಮರಾಠಿಗರ ಸಂಸ್ಥಾನವಾಗಿತ್ತು. ಕೆಲವಂದಿಷ್ಟು ಹಿರಿಯರು ಸೇರಿಕೊಂಡು ಕನ್ನಡವನ್ನು ಕಟ್ಟಲು ಭದ್ರ ಭೂನಾದಿಯನ್ನು ಹಾಕಿದ್ದಾರೆ. ಕೃಷಿಯಲ್ಲಿ, ಸಾಹಿತ್ಯದಲ್ಲಿ, ಕ್ರೀಡೆಯಲ್ಲಿ. ಶೈಕ್ಷಣಿಕತೆಯಲ್ಲಿ, ಉದ್ಯೋಗದಲ್ಲಿ ಮುಂದೆ ಸಾಗಬೇಕಾಗಿದೆ ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಮಖಂಡಿ ಸಂಘವನ್ನು ಕಟ್ಟಿ ಇಂದು 57 ವರ್ಷಗಳು ಕಳೆದಿವೆ. ಕೇವಲ ಮೆರವಣಿಗೆ ಮಾಡುವ ಮೂಲಕ ಆಚರಣಿ ಮಾಡಿದರೆ ಸಾಲದು. ಕನ್ನಡದ ಬಗ್ಗೆ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ದಿನವಾಗಿದೆ. ಜಮಖಂಡಿಯಲ್ಲಿ ಮೊದಲು ಮರಾಠಿ ಭಾಷೆಯಲ್ಲಿ ವ್ಯಾಪಾರ ವಹಿವಾಟಗಳು. ಮನೆಯ ಖರೀದಿಯ ಕಾಗದ ಪತ್ರಗಳು ಎಲ್ಲವೂ ಮರಾಠಿ ಭಾಷೆಯಲ್ಲಿ ನಡೆಯುತ್ತಿದ್ದವು. ಅದಕ್ಕಾಗಿ ಹಿರಿಯರು ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಂಘವನ್ನು ಕಟ್ಟಿ. ಕನ್ನಡ ಭಾಷೆಯನ್ನು ಉಳಿಸಿ.ಬೆಳಸಿದ್ದಾರೆ. ಕನ್ನಡ ಸಂಘಕ್ಕೆ ಒಂದು ಭವನವನ್ನು ನಿರ್ಮಾಣ ಮಾಡಲು ಮನವಿ ಸಲಿಸಲಾಗಿದೆ. ಅದು ಸರಕಾರದ ಮಟ್ಟದಿಂದ ಮತ್ತು ಜಿಲ್ಲಾಡಳಿತದಿಂದ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ನಾನು ಕೂಡಾ ಹೋರಾಟ ಮಾಡುತ್ತೇನೆ ಎಂದರು.

ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ ಮಾತನಾಡಿ, ಕನ್ನಡ ಸಂಘವನ್ನು ಕಟ್ಟಿ ಸುಮಾರು ವರ್ಷಗಳು ಕಳೆದರು ಸಹ ನಮ್ಮ ಸಂಘಕ್ಕೆ ಕನ್ನಡ ರಾಜೋತ್ಸವ ಪ್ರಶಸ್ತಿ ದೊರೆಯದೆ ಇರುವದು ನಮ್ಮ ದುದರ್ೈವದ ಸಂಗತಿಯಾಗಿದೆ. ಪ್ರತಿ ವರ್ಷವೂ ಕೂಡಾ ಮನವಿಯನ್ನು ಸಲಿಸಿದರು ಪ್ರಯೋಜನವಾಗುತ್ತಿಲ್ಲ. ಇಲ್ಲಿರುವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಪ್ರಶಸ್ತಿ ದೊರೆಯುತ್ತಿಲ್ಲ ಎಂದು ತಮ್ಮ ನೋವವನ್ನು ವ್ಯಕ್ತ ಪಡಿಸಿದರು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಮಾತನಾಡಿ, ತಾಯಂದಿಯರು ತಮ್ಮ ಮಕ್ಕಳ ಕೈಯಲ್ಲಿ ಮೋಬೈಲ್ ನೀಡುವ ಬದಲು ಕನ್ನಡ ನಾಡು,ನುಡಿಯ ಬಗ್ಗೆ ತಿಳುವಳಿಕೆ ನೀಡಬೇಕು. ಕನ್ನಡಕ್ಕಾಗಿ ಸಾಕಷ್ಟು ಮಹನೀಯರು ಹೋರಾಟವನ್ನು ಮಾಡುವ ಮೂಲಕ ಕನ್ನಡ ಭಾಷೆಯನ್ನು ಕಟ್ಟಿ ಇಂದು ಕನರ್ಾಟಕವಾಗಿದೆ, 1973 ನ, 1ರಂದು ದಿ.ದೇವರಾಜ ಅರಸರು ನಾಮಕರಣ ಮಾಡಿದ್ದಾರು. ಇಂದು 50 ವರ್ಷ ಪೊರೈಸಿದೆ. ರಾಜ್ಯ ಸಿಎಂ ಅವರು ಕನ್ನಡದ ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ. ಸರಕಾರದ ಆದೇಶದಂತೆ ಕಡ್ಡಾಯವಾಗಿ 5 ಕನ್ನಡ ಸಾಹಿತಿಗಳು ಬರೆದ ಹಾಡುಗಳನ್ನು ಹಾಡಬೇಕು. ನ್ಯಾಯಾಲದ ಕಲಪಾಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕೆಂದು ಮನವಿಯನ್ನು ಸಲಿಸಲಾಗಿದೆ ಎಂದರು.

ಅರುಣಕುಮಾರ ಶಹಾ ಮಾತನಾಡಿದರು. ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಬಿಇಒ ಅಶೋಕ ಬಸನ್ನವರ, ಸಿಡಿಪಿಒ ದಾಸರ, ಪಿ,ಬಿ,ಅಜ್ಜನ್ನವರ, ಸಂತೋಷ ತಳಕೇರಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರವಿ ತೇಲಿ ನಿರೂಪಿಸಿದರು. 

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ. ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳು ಸಾಹಿತಿಗಳು, ಹೋರಾಟಗಾರರು, ದಾಸರು, ಸಂತರು,ಶರಣರ ವೇಷಭೂಷನವನ್ನು ಧರಿಸಿದ್ದರು. ಮಹಿಳೆಯರು ಕುಂಭ ಮೇಳವನ್ನು ಹೊತ್ತಿದರು. ವಿವಿಧ ವಾದ್ಯಮೇಳಗಳೊಂದಿಗೆ ನಗರದ ಪ್ರಮೂಕ ರಸ್ತೆಯಲ್ಲಿ ಭವ್ಯವಾದ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಂಚರಿಸಿ ಬಸವ ಭವನವನ್ನು ತಲುಪಿತು. 


ಸುದ್ದಿ ಓದಿ