ಕನಕದಾಸರ ಜಯಂತಿ ಆಚರಣೆ
ರಾಣಿಬೆನ್ನೂರ 01: ನಗರದ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ, ನಿರ್ದೇಶಕರಾದ ಕೃಷ್ಣಮೂರ್ತಿ ಸುಣಗಾರ, ಹನುಮಂತಪ್ಪ ಕುರುವತ್ತಿ, ವೀರಣ್ಣ ಭಾರ್ಕಿ, ಗಣೇಶ ಜಡಮಲಿ, ಲಕ್ಷ್ಮಣ ದಾಸರ, ಲಕ್ಷ್ಮಣ ಸ್ಮಣಗಾರ, ರಾಜೇಂದ್ರ ಅಂಬಿಗೇರ, ರಾಮಪ್ಪ ಲಮಾಣಿ, ರೇಣುಕಾ ಅಬ್ಬಿಗೆರಿ, ಜಲಜಾಕ್ಷಿ ಗುರ್ಕಿ, ಶಿವಲಿಂಗಪ್ಪ ಮೆದಾರ್, ಸುರೇಶ ಜಡಮಲಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.