ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಲ್ಇ ಸಂಸ್ಥಾಪನಾ ದಿನಾಚರಣೆ
ಲೋಕದರ್ಶನ ವರದಿ
ನೇಸರಗಿ 13 : ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ 111 ನೇ ಕೆಎಲ್ಇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಹಾಗೂ ಬೆಂಗಳೂರಿನ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಹಹೋಗದಲ್ಲಿ ರೈತರಿಗೆ/ಎಫ್ಪಿಒಗಳಿಗೆ ಕೃಷಿ ಉತ್ಪನ್ನಗಳ/ ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರಿ್ಡಸಲಾಯಿತು.
ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ಕೆಎಲ್ಇ ಸಂಸ್ಥೆಯನ್ನು ಸಂಸ್ಥಾಪಿಸಲು ಶ್ರಮಿಸಿದ ಏಳು ಜನ ಶಿಕ್ಷಕರಾದ, ಪಂಡಿತಪ್ಪ ಚಿಕ್ಕೋಡಿ, ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಹೆಚ್. ಎಫ್. ಕಟ್ಟಿಮನಿ ಮತ್ತು ಬಿ. ಬಿ. ಮಮದಾಪೂರ, ಬಿ. ಎಸ್. ಹಂಚಿನಾಳ ಮತ್ತು ಸರದಾರ ವೀರನಗೌಡ ಪಾಟೀಲ ಇವರ ಭಾವಚಿತ್ರಗಳ ಅಲಂಕರಿಸಿ ಅವರನ್ನು ಪೂಜಿಸಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಪೇಶ್ವೆಗಳ ಆಡಳಿತದಲ್ಲಿ ಕನ್ನಡದ ನೆಲವನ್ನು ಹದಗೊಳಿಸಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಕನ್ನಡದ ಬೀಜವನ್ನು ಬಿತ್ತಿದ ಕೆಎಲ್ಇ ಸಂಸ್ಥಾಪಕರಿಗೆ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ಸಿಬ್ಬಂದಿ ವರ್ಗದವರು ನಮನಗಳನ್ನು ಸಲ್ಲಿಸಿದರು. ಅದೇ ರೀತಿ ಏಳು ಜನ ಶಿಕಕ್ಷರಿಗೆ ಬೆಂಬಲವಾಗಿ ನಿಲ್ಲುತ್ತ ಪ್ರಾತಃಸ್ಮರಣಿಯಾದ ರಾವಬಹದ್ದೂರ ರುದ್ರಗೌಡ ಅರಟಾಳ, ರಾವಬಹದ್ದೂರ ವೈಜಪ್ಪ ಅನಿಗೋಳ, ರಾವಬಹದ್ದೂರ ವಿ. ಜಿ. ನಾಯಕ ದೇಸಾಯಿ, ಚಚಡಿ ಇವರ ಒಂದು ನಿಸ್ವಾರ್ಥ ಸೇವೆ ವ್ಯರ್ಥವಾಗದೇ ಇಡೀ ಸಮಾಜಕ್ಕೆ ಹೊಸ ಪ್ರಗತಿ ಹೆದ್ದಾರಿ ನಿರ್ಮಿಸಿದೆ.
ಇಂಥ ಒಂದು ಸಂಸ್ಥೆಯನ್ನು ಮುಂದುವರೆಸಿಕೊಂಡು ಅಷ್ಟಮ ಋಷಿಯಾಗಿ ಕಳೆದ 41 ವರ್ಷಗಳಲ್ಲಿ 316 ಸಂಸ್ಥೆಗಳನ್ನು ಹುಟ್ಟು ಹಾಕಿ ಜಗತ್ತಿನಾದ್ಯಂತ ಕೆಎಲ್ಇ ಸಂಸ್ಥೆಯ ಹೆಸರನ್ನು ರಾರಾಜಿಸುವಂತೆ ಮಾಡಿದ ಡಾ.ಪ್ರಭಾಕರ ಕೋರೆಯವರ ಕಾರ್ಯವು ಅವಿಸ್ಮರಣೀಯ ಹಾಗೂ ಇತಿಹಾಸದಲ್ಲಿ ಬರೆದಿಡುವಂತಹ ಕಾರ್ಯವಾಗಿದೆ ಎಂದು ಸ್ಮರೀಸಿದರು. ಅದೇರೀತಿ, ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಇವರು ಕೆಎಲ್ಇ ಸಂಸ್ಥೆಯು 1916 ರಿಂದ ನಡೆದು ಬಂದ ದಾರಿ ಕುರಿತು ಮಾತನಾಡಿದರು.
ತಾಂತ್ರಿಕ ಅಧಿವೇಶನದಲ್ಲಿ ಬೆಂಗಳೂರಿನ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ದ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್, ಕಾರಂತ್ ಬಿ ಇವರು ಕೃಷಿ ಉತ್ಪನ್ನಗಳಿಗೆ ಇರುವ ರಫ್ತು ಅವಕಾಶಗಳ ಕುರಿತು ಹಾಗೂ ಮಾರ್ಗಸೂಚಿಗಳ ಕುರಿತು ವಿವರವಾದ ಮಾಹಿತಿ ನೀಡಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಾಜಶೇಖರ ಪಾಟೀಲ, ಕರ್ನಾಟಕ ನೀರಾವರಿ ನಿಗಮ, ಹಿಡಕಲ್ ಡ್ಯಾಂ, ಹುಕ್ಕೇರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರೈತರು ತಾವು ಬೆಳೆದಿರುವಂತಹ ಬೆಳೆಗಳಿಗೆ ಒಳ್ಳೆಯ ಬೆಲೆ ಬರಲು ಬೆಳೆಯನ್ನು ಶ್ರೇಣೀಕರಿಸಿ ಮಾರುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಇವರು ಸ್ವಾಗತಿಸಿ, ಕಾರ್ಯಕ್ರಮ ಕುರಿತು ಕಿರುಪರಿಚಯ ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಡಾ. ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ವಿನೋದ ಕೋಚಿ, ಮಂಜುನಾಥ ಪಿ. ಐ., ಬಸವರಾಜ ಅಮ್ಮಿನಬಾವಿ ಹಾಗೂ ವೀಣಾ ಬನ್ನೂರ ಇವರು ಉಪಸ್ಥಿತರಿದ್ದರು.