ಸಿರುಗುಪ್ಪ

ಪವಿತ್ರ ರಂಜಾನ್ ಹಬ್ಬ ಸಡಗರ ಸಂಭ್ರಮದಿಂದ ಆಚರಣೆ

ಪವಿತ್ರ ರಂಜಾನ್ ಹಬ್ಬ ಸಡಗರ ಸಂಭ್ರಮದಿಂದ ಆಚರಣೆ

ಸಿರುಗುಪ್ಪ 04: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಎಲ್ಲಾ ಮಸೀದಿಗಳ ಮೊಹಲ್ಲಾಗಳಿಂದ ಕಿರಿಯರು ಹಿರಿಯರು ಯುವಕರು ಸಾವಿರಾರು ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ  ಮುಖ್ಯ ರಸ್ತೆಯಿಂದ ಅಲ್ಲಾಹನ ನಾಮ ಸ್ಮರಿಸುತ್ತಾ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಈದುಲ್ ಫಿತರ್ ನಮಾಜ್ ನಿರ್ವಹಿಸಿದರು.  

ಖತೀಬ್ ಮೌಲಾನಾ ಶಫಿ ಅಹ್ಮದ್ ಅವರು ಖುತ್ ಬಾ ಭಾಷಣ ಅಲ್ಲಾಹ್  ರಸೂಲರ ಕುರಿತು ಮತ್ತು ಈದುಲ್ ಫಿತ್ರ್‌ ಬಗ್ಗೆ ವಿವರಿಸಿ ಉಪನ್ಯಾಸ ನೀಡಿದರು ಮತ್ತು ಆಶೀರ್ವಚನ ದುಅ ಮಾಡಿದರು ಜಮೀನ್ದಾರ್ ಬಳ್ಳಾರಿ ಜಿಲ್ಲಾ ವಕ್ಫ್‌ ಬೋರ್ಡ್‌ ಮಾಜಿ ಉಪಾಧ್ಯಕ್ಷರು ಸೈಯದ್ ಹಾಜಿ ಮೊಹಿಯುದ್ದೀನ್ ಖಾದ್ರಿ ಸಾಹೇಬ್ ಸೈಯದ್ ಅಹ್ಮದ್ ಸಾಹೇಬ್ ಸೈಯದ್ ಅನ್ಸಾರ್  ಖಾದ್ರಿ ಸಾಹೇಬ್ ಮುಕುಂದ ಸೈಯದ್ ಖಾದರ್ ಬಾಷಾ ಖಾದ್ರಿ ಎಂ ರಸೂಲ್ ಸಾಬ್ ಸಂದಾನಿ ಮಸೀದಿ ಮೆಕ್ಕಾ ಮಸೀದಿ ಸೆಕ್ರೆಟರಿ ಮುಲ್ಲಾ ವಲಿಸಾಬ್ ಚಾಂದ್ ಸಾಬ್ ಎಲ್ಲಾ ಮಸೀದಿಗಳ ಮುತವಲ್ಲಿಗಳು ಇಮಾಮರು ಗಣ್ಯರು ಪರಸ್ಪರ ವಿನಿಮಯ ಹಸ್ತ ಲಾಗಿಸಿ ಸಂತೋಷದಿಂದ ಈದ್ ಮುಬಾರಕ್ ಹಬ್ಬದ ಶುಭಾಶಯ ಕೋರಿ ಖಬರಸ್ತಾನ್ ಗೆ ತೆರಳಿ ಗೋರಿಗಳಿಗೆ ಹೂವು ಅರ​‍್ಿಸಿ ಖುರಾನ್ ಫಾತೇಹ ಓದಿಸಿ ಜಿಯಾರತ್ ದೊಂದಿಗೆ ದರ್ಶನ ಪಡೆದರು. ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. 


ಸುದ್ದಿ ಓದಿ