35 ನೇ ಪಾವನ ಚಾತುರ್ಮಾಸ ವೃತದ ಆಚರಣೆ
ಕಾಗವಾಡ12. ಚಾತುರ್ಮಾಸ ಆಚರಣೆ ಹಿನ್ನೆಲೆಯಲ್ಲಿ ಪ.ಪೂ. ಚರ್ಯಾಶಿರೋಮಣಿ ಆಚಾರ್ಯ 108 ವಿಶುದ್ಧಸಾಗರಜಿ ಮಹಾರಾಜರ ಸಂಘವು ಜು.14 ರಂದು ಬೆಳಿಗ್ಗೆ 7ಗಂಟೆ25 ನಿಮಿಷಕ್ಕೆ ಕೊಲ್ಲಾಪೂರ ಜಿಲ್ಲೆಯ ನಾಂದಣಿಯಲ್ಲಿ ಭವ್ಯ ಮಂಗಲ ಪುರ ಪ್ರವೇಶ ಆಗಲಿದೆ ಎಂದು ಚಾತುರ್ಮಾಸ ಸಮೀತಿಯ ಸಂಚಾಲಕ ಅರುಣಕುಮಾರ ಯಲಗುದ್ರಿ ತಿಳಿಸಿದ್ದಾರೆ.
ಗುರುವಾರ ದಿ. 11 ರಂದು ಐನಾಪೂರ ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಚರ್ಯಾ ಶಿರೋಮನಿ ಆಚಾರ್ಯ 108 ಮುನಿಮಹಾರಾಜರು ಜೊತೆಗೆ 26 ತ್ಯಾಗಿಗಳೊಂದಿಗೆ ಈ ವರ್ಷದ 35 ನೇ ಪಾವನ ಚಾತುರ್ಮಾಸವನ್ನು ಆಚರಿಸಲಿದ್ದಾರೆ. ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಒಟ್ಟು 743 ಗ್ರಾಮಗಳನ್ನು ಒಳಗೊಂಡ ಅತ್ಯಂತ ಪುರಾತನವಾದ ಧರ್ಮಪೀಠ ನಾಂದಣಿಯಲ್ಲಿ ಈ ಪಾವನ ಚಾತುರ್ಮಾಸ ನಡೆಯಲಿದೆ ಎಂದರು.
ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಸಂಸ್ಥಾನ ಮಠ (ಕರವೀರ)ದ ವತಿಯಿಂದ ಇದೇ ಪ್ರಥಮ ಬಾರಿಗೆ ಬೃಹತ್ ಪ್ರಮಾಣದಲ್ಲಿ ಈ ಚಾತುರ್ಮಾಸ ಆಯೋಜನೆ ಮಾಡಲಾಗಿದೆ. ಈ ವಿಶಾಲ ಸಂಘವು ಈ ಪ್ರದೇಶದಲ್ಲಿ ಚಾತುರ್ಮಾಸ (ವರ್ಷಾಯೋಗ) ಆಚರಿಲಿದೆ ಎಂದರು.
ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಯವರ ಅಧಿನೇತೃತ್ವದಲ್ಲಿ ಈ ಮಂಗಲ ಚಾತುರ್ಮಾಸವು ಅದ್ದೂರಿಯಾಗಿ ನಡೆಯಲಿದ್ದು, ಆಚಾರ್ಯಶ್ರೀಗಳ ಪರಿಣಾಮಕಾರಿ ಪ್ರವಚನ ವಾಣಿಯಿಂದ ಈ ಭಾಗದ ಶ್ರಾವಕ ಶ್ರಾವಿಕರು ಅಧ್ಯಾತ್ಮಿಕ ಓತಣವನ್ನು ಸವಿಯಲಿದ್ದಾರೆ ಎಂದು ಹೇಳಿದರು
ಜಿನಸೇನ ಸಂಸ್ಥಾನ ಮಠದ ಸೇವಾದಳ, ವೀರ ಮಹಿಳಾ ಮಂಡಳ ಹಾಗೂ ನಾಂದಣಿಯ ಸಕಲ ಜೈನ ಸಮಾಜ ಈ ಕಾರ್ಯಕ್ರಮ ಆಯೋಜನ ಮಾಡಿದ್ದು, ಜು.14ರಂದು ಬೆಳಿಗ್ಗೆ ಭವ್ಯ ಮಂಗಲ ಪ್ರವೇಶದ ಆಗಲಿದೆ. ಜು.20ರಂದು ಮಧ್ಯಾಹ್ನ 1 ಗಂಟೆಗೆ ಅತಿಶಯ ಕ್ಷೇತ್ರ ನಾಂದಣಿಯಲ್ಲಿ ಚಾತುರ್ಮಾಸದ ಕಲಶ ಪ್ರತಿಷ್ಠಾಪಣಾ ಕಾರ್ಯಕ್ರಮ ನಡೆಯುವುದು. ನಂತರ ಕಳಶಗಳ ವಿತರಣೆ ನಡೆಯಲಿದೆ. ಸಾಂಗಲಿ, ಕೊಲ್ಲಾಪುರ, ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲೆಯ ಸಹಸ್ರಾರು ಶ್ರಾವಕ, ಶ್ರಾವಿಕರು ಮಂಗಲ ಪ್ರವೇಶ ಹಾಗೂ ಅಧ್ಯಾತ್ಮಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು. ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಈ ವೇಳೆ ಚಾತುರ್ಮಾಸ ಸಮಿತಿಯ ಕರ್ನಾಟಕ ವಿಭಾಗದ ಅಧ್ಯಕ್ಷ ಡಾ.ಅಪ್ಪಾಸಾಹೇಬ ನಾಡಗೌಡ, ಸಂಚಾಲಕರಾದ ಅರುಣಕುಮಾರ ಯಲಗುದ್ರಿ, ರಾವಸಾಹೇಬ ಪಾಟೀಲ, ಸಂಜಯ ಕುಚನೂರೆ, ದಾದಾ ಪಾಟೀಲ, ಸುಭಾಸ ಪಾಟೀಲ, ಚನರಾವ್ ಪಾಟೀಲ, ಯಶವಂತ ಪಾಟೀಲ, ಅನುಪ ಶೆಟ್ಟಿ, ತಾತ್ಯಾಸಾಬ ಕುಚನೂರೆ, ಅಜೀತ ಪಾಟೀಲ, ಸುನೀಲ ಪಾಟೀಲ, ಧರೆಪ್ಪ ಕೆಂಪವಾಡೆ, ತಾತ್ಯಾಸಾಬ ದಾನೊಳ್ಳಿ, ಬಾಳಾಸಾಬ ದಾನೊಳ್ಳಿ ಸೇರಿದಂತೆ ಅನೇಕ ಮುಖಂಡರು ಪತ್ರಕಾಗೋಷ್ಠಿಯಲ್ಲಿ ಪಾಲ್ಗೊಂಡು, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.