ರಾಣೆಬೆನ್ನೂರ

ಗಣೇಶ ಹಬ್ಬ ಮೋಜಿಗಾಗಿ ಆಚರಿಸುವುದು ದುರಂತ ಸಂಗತಿ: ದೇವೇಂದ್ರಪ್ಪ ಯಲಜಿ

ಗಣೇಶ ಹಬ್ಬ ಮೋಜಿಗಾಗಿ ಆಚರಿಸುವುದು ದುರಂತ ಸಂಗತಿ: ದೇವೇಂದ್ರಪ್ಪ ಯಲಜಿ

ರಾಣಿಬೆನ್ನೂರ,13: ಬ್ರೀಟೀಷರಿಂದ ಭಾರತವನ್ನು ದಾಸ್ಯಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸುವ ಹಾಗೂ ಜಾಗೃತಗೊಳಿಸುವ ಸದುದುದ್ದೇಶದಿಂದ ಬಾಲಗಂಗಾಧರನಾಥ ತಿಲಕರು ಸಾರ್ವಜನಿಕವಾಗಿ ಗಣೇಶ ಹಬ್ಬವನ್ನು ಆಚರಿಸಲು ಮುಂದಾಗಿದ್ದರು. ಅದರ ಅರಿವಿಲ್ಲದ ಇಂದಿನ ಯುವಪೀಳಿಗೆ ಮೋಜಿಗಾಗಿ ಆಚರಿಸುವುದು ದುರಂತ ಸಂಗತಿಯಾಗಿದೆ ಎಂದು  ಗ್ರಾಪಂ ಅಧ್ಯಕ್ಷ ದೇವೇಂದ್ರ​‍್ಪ ಯಲಜಿ ಹೇಳಿದರು.  

ತಾಲೂಕಿನ ಮಾಕನೂರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗೆಳೆಯರ ಬಳಗದ ವತಿಯಿಂದ ಪ್ರತಷ್ಠಾಪಿಸಿರುವ ಗಣೇಶೋತ್ಸವದ ಅಂಗವಾಗಿ ಗೋವಾದ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಪರಶುರಾಮ ವಿಠ್ಠಪ್ಪ ಕಲಿವಾಳ ಕಲಾ ತಂಡದವರಿಂದ ರಸಮಂಜರಿ, ಭಕ್ತಿಗೀತೆ, ಭಾವಗೀತೆ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಗೆಳೆಯರ ಬಳಗದ ಮುಖಂಡ ಮಂಜುನಾಥ ಹೊರಕೇರಿ ಮಾತನಾಡಿ, ಗ್ರಾಮದ ಪ್ರಜ್ಞಾವಂತ ಗೆಳೆಯರ ಬಳಗದವರು ಚಿಂತನ ಮಂಥನ ಮಾಡಿ  ರಸಮಂಜರಿ ಕಾರ‌್ಯಕ್ರಮದ ಮೂಲಕ  ಭಕ್ತಿಗೀತೆ, ಭಾವಗೀತೆ, ಸ್ವಾತಂತ್ರ್ಯ ಹೋರಾಟದ ಕ್ರಾಂತಿ ಗೀತೆ ಹಾಗೂ ಜಾನಪದ ಗೀತೆಗಳ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಚಿುರ ಪರಿಚಯಿಸುವುದು  ಸೂಕ್ತ ಎಂದು ತೀಮಾನಿಸಿ ಕಾರ‌್ಯಕ್ರಮ ಹಮ್ಮಿಕೊಂಡು ಮನಗೆ ಸ್ವಾತಂತ್ರ್ಯ ಬಿಟ್ಟಿಯಾಗಿ ಸಿಕ್ಕಿಲ್ಲ ಹಲವಾರು ಹೋರಾಟಗಾರ ಬಲಿದಾನದಿಂದ ದೊರೆತಿದೆ ಎಂಬುದು ಇಂದಿನ ಮಕ್ಕಳಿಗೆ ಅರಿವಾಗಲಿ ಎಂಬ ಉದ್ದೇಶವಾಗಿತ್ತು ಇಂದು ಅದು ಈಡೇರಿದ ಎಂದು ಭಾವಿಸುತ್ತೇನೆ ಎಂದರು.    

ಇಂದು ಒತ್ತಡದ ಜೀವನದಲ್ಲಿ ಪಾಲಕರೂ ಸಹ ಮಕ್ಕಳ ಕಡೆಗೆ ಹಚ್ಚಿನ ಗಮನ ಹರಿಸುತ್ತಿಲ್ಲ. ಇದರಿಂದ ಮಕ್ಕಳು ಸಹ ಪಾಲಕರ ಭಯವಿಲ್ಲದೆ ದೂರದರ್ಶನ ಅಥಾವಾ ಮೋಬೈಲ್‌ನಲ್ಲಿ ಕಾಲಹರಣ ಮಾಡಿ ಅಭ್ಯಾಸದಿಂದ ದೂರ ಉಳಿಯುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯವಿಲ್ಲ. ಆದಷ್ಟು ಪ್ರತಿದಿನ ನೀತಿ ಪಾಠಗಳ ಮೂಲಕ ಅವರಿಗೆ ನೈತಿಕ ಜೊತೆಗೆ ಸಂಸ್ಕಾರ ನೀಡಲು ಪಾಲಕರು ಮುಂದಾಗಬೇಕು ಎಂದರು.  

ಇದೇ ಸಂದರ್ಭದಲ್ಲಿ ಕಲಾ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಪರಶುರಾಮ ವಿಠ್ಠಪ್ಪ ಕಲಿವಾಳ, ಗ್ರಾಪಂ ಅಧ್ಯಕ್ಷ ದೇವೇಂದ್ರ​‍್ಪ ಯಲಜಿ ಮತ್ತು ಹಿರಿಯ ಗೃಹಣಿ ಹಾಗೂ ಒಗಟುಗಳ ಕಲೆ ಕರಗತ ಮಾಡಿಕೊಂಡಿರುವ ಬಸಮ್ಮ ಸಿರಗೇರಿ ಇವರನ್ನು ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಈರಣ್ಣ ಹಲಗೇರಿ, ಹನುಮಂತಗೌಡ ದೊಡ್ಡಗೌಡ್ರ, ಮಹಾಂತೇಶ ಆರಂದಿ, ರಮೇಶ ಐರಣಿ, ರಮೇಶ ಹಲಗ್ವರಿ, ನಾಗನಗೌಡ ಕುರಗೋಡಪ್ಪನವರ, ಡಾಽ ಮಹಾಂತೇಶ ಹುಚ್ಚಣ್ಣನವರ,  ಲಿಂಗರಾಜ ಹಲಗೇರಿ, ರಾಜು ಬಣಕಾರ, ಬೀಮಣ್ಣ ಚಿನ್ನಣ್ಣನವರ, ಗುರುಬಸಪ್ಪ ಕುರುಗೋಡಪ್ಪನವರ, ಈರನಗೌಡ ನಂದಿಗಾವಿ, ಬಸನಗೌಡ ದೊಡ್ಡಗೌಡ್ರ, ನಾಗನಗೌಡ ದೊಡ್ಡಗೌಡ್ರ, ಕೊಟ್ರ​‍್ಪ ಐರಣಿ ಮತ್ತಿತರರು ಇದ್ದರು. 


ಸುದ್ದಿ ಓದಿ