ಅಂಬೇಡ್ಕರರವರ ಜನ್ಮ ದಿನ ಆಚರಿಸುವುದು ನಮ್ಮೆಲ್ಲರ ಪುಣ್ಯ: ಮನಗೂಳಿ
ಸಿಂದಗಿ; ಇಡೀ ದೇಶಕ್ಕೆ ಒಂದೇ ಸಂವಿಧಾನವನ್ನು ನೀಡಿ ಸಮಸಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರರವರ ತತ್ವ ಆದರ್ಶಗಳ ಮೇಲೆ ಅವರ ಜನ್ಮ ದಿನ ಆಚರಿಸುವುದು ನಮ್ಮೆಲ್ಲರ ಪುಣ್ಯ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ.ಎಂ. ಮನಗೂಳಿ ಹೇಳಿದರು.
ಪಟ್ಟಣದ ನಗರದ ಜೈಭೀಮ ನಗರದ “ಭೀಮ್ ಬಾಯ್” ವತಿಯಿಂದ ಹಮ್ಮಿಕೊಳ್ಳಲಾಗುತ್ತಿದ್ದ ವಿಶ್ವರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರವರ 131ನೇ ಜಯಂತ್ಯೋತ್ಸವ ಪ್ರಯುಕ್ತ ತಾಲೂಕಿನಲ್ಲಿ ಪ್ರಚಾರ ಕೈಕೊಳ್ಳಲು ಡಾ. ಅಂಬೇಡ್ಕರ ವೃತ್ತದಲ್ಲಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಂದೀಪ ಚೌರ, ರಾಜಣ್ಣಿ ನಾರಾಯಣಕರ, ಪುರಸಭೆ ಸದಸ್ಯರ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ಆನಂದ ಡೋಣೂರ, ನೇತೃತ್ವ ವಹಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಾಯ್.ಸಿ.ಮಯೂರ ಹಾಗೂ ಭೀಮ್ ಬಾಯ್ ಪ್ರಮುಖ ಸಚೀನ ಚೌರ, ಜೈಭೀಮ ನಗರದ ನಿವಾಸಿಗಳಾದ ಜೈಭೀಮ ಕೂಚಬಾಳ, ಜೈಭೀಮ ತಳಕೇರಿ, ನವೀನ ಹೊಸಮನಿ, ನೀಲಕಂಠ ಹೊಸಮನಿ ಪ್ರದೀಪ ಹಚೇನವರ, ಪ್ರವೀಣ ದೊಡಮನಿ, ಭೀಮು ಚೌರ, ಮಹೇಶ ಜಾಬಾನವರ, ಶ್ರೀಮಂತ ಚೌರ, ರಮೇಶ ಬಿಸನಾಳ, ಪ್ರವೀಣ ಹೊಸಮನಿ, ಮಿಲನ ಮಣೂರ ಹಾಜರಿದ್ದರು.
08 ಎಸ್.ಎನ್ಡಿ3 ತಾಲೂಕಿನಲ್ಲಿ ಪ್ರಚಾರ ಕೈಕೊಳ್ಳಲು ಡಾ. ಅಂಬೇಡ್ಕರ ವೃತ್ತದಲ್ಲಿ ಪ್ರಚಾರ ವಾಹನಕ್ಕೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ.ಎಂ. ಮನಗೂಳಿ ಚಾಲನೆ ನೀಡಿದರು.