ಅಂತರರಾಷ್ಟ್ರೀಯ

ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣ: ಅಮೇರಿಕದ ವ್ಯಕ್ತಿಗೆ 100 ವರ್ಷ ಜೈಲು ಶಿಕ್ಷೆ!

ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣ: ಅಮೇರಿಕದ ವ್ಯಕ್ತಿಗೆ 100 ವರ್ಷ ಜೈಲು ಶಿಕ್ಷೆ!

ವಾಷಿಂಗ್ ಟನ್: ಭಾರತೀಯ ಮೂಲದ ಮಗುವಿನ ಸಾವಿಗೆ ಕಾರಣವಾದ ವ್ಯಕ್ತಿಯೋರ್ವನಿಗೆ ಅಮೇರಿಕಾದ ನ್ಯಾಯಾಲಯ 100 ವರ್ಷಗಳ ಶಿಕ್ಷೆಯನ್ನು ವಿಧಿಸಿದೆ.
 
2021 ರಲ್ಲಿ 5 ವರ್ಷದ ಭಾರತೀಯ ಮೂಲದ ಹೆಣ್ಣುಮಗುವಿನ ಸಾವಿಗೆ 35 ವರ್ಷದ ಜೋಸೆಫ್ ಲೀ ಸ್ಮಿತ್ ಕಾರಣವಾಗಿದ್ದ ಆರೋಪ ಸಾಬೀತಾಗಿದ್ದು, ಆತನ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಈಗ ಪ್ರಕಟಿಸಿದೆ.
 
ಮಾಯಾ ಪಟೇಲ್ ಎಂಬ 5 ವರ್ಷದ  ಮಗು ಹೊಟೆಲ್ ರೂಮಿನೊಳಗೆ ಆಡುತ್ತಿತ್ತು, ಏಕಾ ಏಕಿ ಬುಲೆಟ್ ಆ ಮಗುವಿನ ತಲೆಗೆ ಹೊಕ್ಕಿತ್ತು. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, 3 ದಿನಗಳ ನಂತರ ಜೀವನ್ಮರಣದ ನಡುವೆ ಹೋರಾಡಿ ಮಾ.23, 2021 ರಂದು ಮೃತಪಟ್ಟಿತ್ತು.

ಸ್ಮಿತ್‌ನ ವಿಚಾರಣೆಯ ಸಮಯದಲ್ಲಿ, ಸೂಪರ್ 8 ಮೋಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿ ಸ್ಮಿತ್ ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಗ್ವಾದಕ್ಕೆ ಇಳಿದದ್ದು ತೀರ್ಪುಗಾರರಿಗೆ ತಿಳಿದುಬಂದಿದೆ.

ಸುದ್ದಿ ಓದಿ