ಬಳ್ಳಾರಿ

ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸಿ.ಶಿವರಾಮ ನೇಮಕ

ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಸಮಿತಿ  ಅಧ್ಯಕ್ಷರಾಗಿ ಸಿ.ಶಿವರಾಮ ನೇಮಕ
C. Shivarama appointed as President of the Ballari District Committee of the Bharatiya Bauddha Mahas


        ಬಳ್ಳಾರಿ 20:  ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಂದ  ಸ್ಥಾಪಿತ ಭಾರತೀಯ ಬೌದ್ಧ ಮಹಾಸಭಾ ಬಳ್ಳಾರಿ ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಪತ್ರಕರ್ತ ಸಿ.ಶಿವರಾಮ ಸಿರಿಗೇರಿ ಮತ್ತು  ಪ್ರಧಾನ ಕಾರ್ಯದರ್ಶಿಯಾಗಿ ಫುಲೆ ಅವರು ನೇಮಕ ವಾಗಿದ್ದಾರೆ.  

          ನಗರದ ಬಳ್ಳಾರಿ ಜಿಲ್ಲಾ ಡಾ.ಬಿ ಆರ್ ಅಂಬೇಡ್ಕರ್ ಸಂಘದ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಸಮಿತಿ ವಾರ್ಷಿಕ ಸಭೆಯಲ್ಲಿ  ಸಮಿತಿ ಪದಾಧಿಕಾರಿಗಳನ್ನು ನೇಮಿಸಲಾಯಿತು.  

ಬಿಎಸ್‌ಐ ಜಿಲ್ಲಾಧ್ಯಕ್ಷ ಕಮಲರತ್ನ ಭಂತೇಜಿ ಅವರ ಅಧ್ಯಕ್ಷತೆ, 

          ಬಿಎಸ್‌ಐ ರಾಷ್ಟ್ರೀಯ ಉಪಾಧ್ಯಕ್ಷ, ಕರ್ನಾಟಕ ಉಸ್ತುವಾರಿ ಮಲ್ಲಿಕಾರ್ಜುನ ಭಾಲ್ಕಿ, ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷರಾದ  ಮನೋಹರ್ ಮೋರೆ ಅವರ ಸಮ್ಮುಖದಲ್ಲಿ ನಾಲ್ವರು ಉಪಾಧ್ಯಕ್ಷರು, ಖಜಾಂಚಿ ಅವರನ್ನು ನೇಮಿಸಲಾಯಿತು.  

            ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಅಗಸನೂರು ಹುಸೇನಪ್ಪ, ಬೂದುಗುಪ್ಪ ಸಿ.ಚಿದಾನಂದ, ಎಮ್ಮಿಗನೂರು ಮಾರುತಿ ಮತ್ತು ಮಹಿಳಾ ವಿಭಾಗದ ಸಂಗೀತಾ.ಪಿ, ಖಜಾಂಚಿಯಾಗಿ  ಕುರುವಳ್ಳಿ ಶೇಖರ್,  ಗಾದಿಲಿಂಗಪ್ಪ ಅವರನ್ನು ನೇಮಿಸಲಾಯಿತು.   

            ಬಿಎಸ್‌ಐ ಮಾಜಿ ರಾಜ್ಯಾಧ್ಯಕ್ಷ, ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವಿ ಎರಕುಲಸ್ವಾಮಿ  ಮತ್ತು ಸಮಿತಿಯ ಬಳ್ಳಾರಿ ಜಿಲ್ಲಾ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರನ್ನು ಜಿಲ್ಲಾ ಸಮಿತಿಯ ಮಾರ್ಗದರ್ಶಕರೆಂದು ಮಲ್ಲಿಕಾರ್ಜುನ ಭಾಲ್ಕಿ ಅವರು ಪ್ರಕಟಿಸಿದರು.  

            ಈ ಸಂದರ್ಭದಲ್ಲಿ   ಕಮಲರತ್ನ ಬಂತೆೇಜಿ ಮಾತನಾಡಿ, ಸಮಿತಿಯಿಂದ ದಮ್ಮ ಯಾತ್ರೆ ಕೈಗೊಳ್ಳುವುದು, ಜನರಲ್ಲಿ ಧಮ್ಮ ಪ್ರಜ್ಞೆ ಮೂಡಿಸುವುದು, ಮೂಢನಂಬಿಕೆಯನ್ನು ತೊಲಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.   

          ಡಾ. ವೆಂಕಟಯ್ಯ ಅಪ್ಪಗೆರೆ  ಮಾತನಾಡಿ ನಮ್ಮ ಜಿಲ್ಲೆಯಲ್ಲಿನ ನಿಟ್ಟೂರು ಗುಡೆಗೋಳ ಮತ್ತು ಬಳ್ಳಾರಿ ಪಕ್ಕದ ಅಶೋಕ ಸಿದ್ದಾಪುರದ ಶಾಸನಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಮತ್ತು ಬುದ್ಧನ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.   

           ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಮಾತನಾಡಿ ವಿಶ್ವದಲ್ಲಿ ಬುದ್ಧ ಧಮ್ಮ ವೇಗವಾಗಿ ಬೆಳೆಯುತ್ತಿದೆ. ಬೌದ್ಧ ನೆಲೆಗಳಿರುವ  ಜಿಲ್ಲೆಯಲ್ಲಿ  ಬುದ್ಧನ ಆರಾಧಕರು,  ವಿಹಾರಗಳು ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.  ಬಿಎಸ್ ಐ ಸಮಾಜದಲ್ಲಿ ಶಿಸ್ತನ್ನು ಕಲಿಸುವ ಶಕ್ತಿ ಹೊಂದಿದೆ. ಬುದ್ಧ ಧಮ್ಮದ ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.  

        ಕಾರ್ಯಕ್ರಮದಲ್ಲಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರಾದ ಕೆ.  ಗಿರಿಮಲ್ಲಪ್ಪ, ಉಪಾಸಕರು ಪಾಲ್ಗೊಂಡಿದ್ದರು.   ಇದೆ ವೇಳೆ ಸಂಘಕ್ಕೆ ಸದಸ್ಯರನ್ನು ನೊಂದಾಯಿಸಿ  ಗುರುತಿನ ಚೀಟಿ ನೀಡಲಾಯಿತು. 


ಸುದ್ದಿ ಓದಿ