ಜಾನುವಾರ ಜಾತ್ರೆ ಜೋರು: ಡಿಸಿ ಆದೇಶ ಗಾಳಿಗೆ
ಯರಗಟ್ಟಿ 01 ಸ್ಥಳೀಯ ಗೋಕಾಕ ರಸ್ತೆಯಲ್ಲಿ ಶನಿವಾರ ಜಾನುವಾರು ಸಂತೆ ವ್ಯಾಪಕ ವಾಗಿ ಜರುಗಿದ ಪರಿಣಾಮ ವಾಹನ ಸವಾರರು ಕೆಲಕಾಲ ಟ್ರಾಫಿಕ್ ಸಮಸ್ಯೆ ಅನುಭವಿಸುವಂತಾಯಿತು.
ಜಾನುವಾರುಗಳಿಗೆ ಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಾನುವಾರ ಸಂತೆ ನಡೆಸದಂತೆ ಡಿಸಿ ನೀತೀಶ ಪಾಟೀಲ್ ಆದೇಶ ಹೊರಡಿಸಿದ್ದು ಜಾನುವಾರು ಬಗ್ಗೆ ಜಾಗೃತ ವಹಿಸುವಂತೆ ತಿಳಿಸಿದ್ದಾರೆ.
ಆದರೆ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಆದೇಶಕ್ಕೆ ಕ್ಯಾರೆ ಅನ್ನದ ಜನ ಗೋಕಾಕ ರಸ್ತೆಗೆ ಹೊಂದಿಕೊಂಡು ಜಾನುವಾರ ಜಾತ್ರೆಯನ್ನು ಜೋರಾಗಿ ಮಾಡಿದ್ದಾರೆ. ಜೊತೆಗೆ ಅಲ್ಲಿ ಜನ-ಜಾನುವಾರ ದಟ್ಟನೆ ಹೆಚ್ಚಿದ್ದರಿಂದಾಗಿ ಸಂತೆ ಮುಗಿಯುವವರೆಗೂ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಇದು ಒಂದು ರೀತಿ ವಾಹನ ಸವಾರರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತು.