ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ
ಕಾಗವಾಡ 24: ಈ ವರ್ಷ ಉತ್ತಮವಾಗಿ ಮಳೆಯಾಗಿದ್ದು, ರೈತರು ಉತ್ತಮ ಕಬ್ಬಿನ ಇಳುವರಿಯ ನೀರೀಕ್ಷೆಯಲ್ಲಿದ್ದಾರೆ. ಈ ವರ್ಷ ನಾವು ಸುಮಾರು 15 ಲಕ್ಷ ಮಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ರೈತರು ನಮ್ಮ ಕಾರ್ಖಾನೆಗೆ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಸಚಿವರು ಹಾಗೂ ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ರೈತರಲ್ಲಿ ಮನವಿ ಮಾಡಿದ್ದಾರೆ.
ಅವರು, ಗುರುವಾರ ದಿ. 24 ರಂದು ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ ಕಾರ್ಖಾನೆಯ ಸನ್ 2024-25 ನೇ ಸಾಲಿನ ಕಬ್ಬು ನುರಿಸುವ ಹಾಂಗಾಮಿಗೆ ಕಬ್ಬಿನ ಕ್ಯಾರಿಯರಗೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಿದ್ದರು. ಇಂದು ಒಳ್ಳೆಯ ಮೂಹರ್ತ ಇರುವದರಿಂದ ಕ್ಯಾರಿಯರಿಗೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿದ್ದು, ಸರ್ಕಾರದ ಆದೇಶ ಬಂದ ನಂತರ ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಸುಮಾರು 15 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ಪ್ರತಿ ದಿನ ಸುಮಾರು 12 ರಿಂದ 15 ಸಾವಿರ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ರೈತ ಬಾಂದವರು ಗಡಿಬಿಡಿ ಮಾಡದೇ, ಸಾವಧಾನವಾಗಿ ಕಬ್ಬು ಪೂರೈಸುವಂತೆ ಶ್ರೀಮಂತ ಪಾಟೀಲ ಮನವಿ ಮಾಡಿದರು.
ಈ ಸಮಯದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ, ನಿರ್ದೇಶಕರಾದ ಸುಶಾಂತ ಪಾಟೀಲ, ಯೋಗೇಶ ಪಾಟೀಲ, ಜನರಲ್ ಮ್ಯಾನೇಜರ್ ಆರ್.ಎ. ಲಟಕೆ, ಮುಖ್ಯ ಕೃಷಿ ಅಧಿಕಾರಿ ಬಂಡು ಜಗತಾಪ, ಚೀಫ್ ಇಂಜನೀಯರ್ ಚಂದ್ರಕಾಂತ ಪಾಟೀಲ, ಸೂರಜ್ ಪಾಟೀಲ, ಸ್ಥಳೀಯ ಮುಖಂಡರಾದ ದಾದಾಗೌಡ ಪಾಟೀಲ, ರಾಜೇಂದ್ರ ಪೋತದಾರ, ಅಪ್ಪಾಸಾಬ ಮಳಮಳಸಿ, ಅಭಯ ಪಾಟೀಲ, ಗಜಾನನ ಯರಂಡೋಲಿ, ಪ್ರಕಾಶ ಹಳ್ಳೋಳ್ಳಿ, ಮುರಗೆಪ್ಪ ಮಗದುಮ್, ಆರ್.ಎಂ. ಪಾಟೀಲ, ರಮೇಶ ತೇಲಿ, ಎಸ್.ಎಸ್. ಹುಂಡೇಕರ, ಲಕ್ಷ್ಮಣ ಹಳಮನಿ, ಪ್ರಕಾಶ ಹಳ್ಳೋಳ್ಳಿ, ದೋಢಿರಾಮ ಅವಳೇಕರ, ಇಂದ್ರಜೀತ ಪಾಟೀಲ, ಸುನೀಲ ಪಾಟೀಲ, ದತ್ತಾತ್ರೇಯ ಕದಮ್, ತುಕಾರಾಮ ರಸಾಳ, ರಮೇಶ ಅವಳೇಕರ, ಮಾರುತಿ ಸಾವಂತ, ಬಾಪು ಪಾಟೀಲ, ಬಾಳು ಮಗದುಮ್, ಮಹಾಂತೇಶ ಕಾಂಬಳೆ, ದೀಲೀಪ ಪವಾರ, ಮನೋಹರ ಪವಾರ ಸೇರಿದಂತೆ ರೈತ ಮುಖಂಡರು, ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.