ಅಭ್ಯರ್ಥಿಗಳಿಗೆ ನಿಸ್ವಾರ್ಥ ಸೇವೆಯ ಗುರಿಯಿರಲಿ: ಶ್ರೀನಿವಾಸ್ ಪಾಟೀಲ
ಕಾಗವಾಡ 19: ಪಟ್ಟಣಗಳ ಅಭಿವೃದ್ಧಿಗಾಗಿ ಎಲ್ಲಾ ಅಭ್ಯರ್ಥಿಗಳು ತಮ್ಮ ಗುರಿ ಇಟ್ಟುಕೊಂಡು ಜನರ ಸಮಸ್ಯೆಗಳು ಆಲಿಸುವ ಜವಾಬ್ದಾರಿ ಹೊಂದಿರಬೇಕು. ಕೆಲವರು ಈ ಸ್ಥಾನ ಅಭಿವೃದ್ಧಿಗಾಗಿ ಇದೆಯೆಂದು ಭಾವಿಸಿಕೊಂಡಿದ್ದಾರೆ. ಅದು ತಪ್ಪು ನಿಸ್ವಾರ್ಥ ಸೇವೆ ನೀಡುವು ಗುರಿ ಹೊಂದಿರಿ ಎಂದು ಬಿಜೆಪಿ ಪಕ್ಷದ ಮುಖಂಡರಾದ ಶ್ರೀನಿವಾಸ್ ಶ್ರೀಮಂತ ಪಾಟೀಲ್ ಚುನಾವಣೆ ಖಣದಲ್ಲಿಲಿರುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ರವಿವಾರ ದಿ. 19ರಂದು ಶೇಡಬಾಳ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 14, 15 ರಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವಾಗ ಅಭ್ಯರ್ಥಿಗಳಿಗೆ ಸೂಚನೆ ನೀಡಿದರು.
ಪಟ್ಟಣಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಮೂಲಭೂತ ಸೌಕರ್ಯಗಳಾದ ಶುದ್ಧಕುಡಿಯುವ ನೀರು ಚರಂಡಿಗಳು ರಸ್ತೆಯ ಸ್ವಚ್ಛತೆ ಬಗ್ಗೆ ಮತ್ತು ಬೀದಿ ದೀಪಗಳ ವ್ಯವಸ್ಥೆಗಳು ನೀಟಾಗಿರಬೇಕು ಈ ವ್ಯವಸ್ಥೆಗಳು ನೀಡುವಜವಾಬ್ದಾರಿ ಪ್ರತಿಯೊಬ್ಬರದಾಗಿದೆಎಂದರು.
ಶೇಡಬಾಳ ಪಟ್ಟಣ ಪಂಚಾಯಿತಿಗೆ 16 ಸದಸ್ಯರು ಆಯ್ಕೆ ಆಗಬೇಕಾಗಿದೆ 49 ಸದಸ್ಯರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪಕ್ಷದ ಎಲ್ಲ ಯುವಕರು ಅಭ್ಯರ್ಥಿಗಳಾಗಿ ಇದ್ದಾರೆ. ಹೆಚ್ಚಿನ ಸಂಖ್ಯೆಯಿಂದ ಸದಸ್ಯರು ಆಯ್ಕೆಗೊಂಡು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎಂದು ಶ್ರೀನಿವಾಸ್ ಪಾಟೀಲ್ ಹೇಳಿದರು.
ಶೇಡಬಾಳ ಸ್ಟೇಷನ್ ವಾರ್ಡಗಳ ಅಭ್ಯರ್ಥಿಗಳಾದ ಶುಭಾಷ್ ಡಾಲೆ, ಪ್ರವೀಣ್ ಕೆಂಪವಾಡ ಇವರ ಪರ ಮತಯಾಚನೆ ಮಾಡಿದರು.
ಈ ವೇಳೆ ಪಕ್ಷದ ಹಿರಿಯ ಮುಖಂಡರಾದ ಶ್ರೀಕಾಂತ ಸಾವಕಾರ, ಪೋಪಟ್ ಸಾಹುಕಾರ, ವಿಠ್ಠಲ್ ತೋಳಕ್ಕೆ, ಪ್ರವೀಣ್ ಪಾಟೀಲ್, ಪೋಪಟ್ ಕವಟಗೇ, ಮಹಾವೀರ ಪಾಟೀಲ್, ಶಿವರಾಜ್ ಕಟ್ಟಿಕರ್, ಅವಯ ದೇವಮೋರೆ, ಸಂದೀಪ್ ಸಾಳುಕೆ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.