ಅಭ್ಯರ್ಥಿಗಳಿಗೆ ಸತತ ಪರಿಶ್ರಮ ಅಗತ್ಯ: ಅರವಿಂದ ದೇಶಮುಖ
ಧಾರವಾಡ 21: ಇಲ್ಲಿನ ಜಯನಗರ ಕ್ರಾಸ್ನಲ್ಲಿರುವ ಶ್ರೀಗುರು ಗಡದೇಶ್ವರ ಕರಿಯರ್ ಅಕಾಡೆಮಿವತಿಯಿಂದ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಗೆ ಅಂತಿಮ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಶನಿವಾರ ಒಂದು ದಿನದ ಉಚಿತ ಕಾರ್ಯಾಗಾರ ಏರಿ್ಡಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಹಿರಿಯ ಶಿಕ್ಷಣ ತಜ್ಞ, ಸಂಪನ್ಮೂಲ ವ್ಯಕ್ತಿ ಅರವಿಂದ ದೇಶಮುಖ, ಅಭ್ಯರ್ಥಿಗಳಿಗೆ ಸತತ ಪರಿಶ್ರಮ ಅಗತ್ಯ. ವಿಷಯಗಳ ಮತ್ತು ಸಾಮಾನ್ಯ ಜ್ಞಾನ ಅಧ್ಯಯನದ ಜೊತೆಗೆ ಏಕಾಗ್ರತೆ ರೂಢಿಸಿಕೊಂಡರೆ ನಿಗದಿತ ಗುರಿ ತಲುಪಲು ಸಾಧ್ಯ ಎಂದರು.
ಅಕಾಡೆಮಿ ನಿರ್ದೇಶಕ ಬಸವರಾಜ ಮಾಢಳ್ಳಿ ಮಾತನಾಡಿ, ಅಕಾಡೆಮಿವತಿಯಿಂದ ಹಲವಾರು ವಿಷಯಗಳ ಬಗ್ಗೆ ಪರಿಣಿತರಿಂದ ಬೋಧನೆ ನಡೆಯಲಿದೆ. ಆದ್ದರಿಂದ ಅಭ್ಯರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಶೈಲ ಪಾಟೀಲ ಅವರು, ಸಾಮಾನ್ಯ ಮನೋಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಿದರು. ರೇಣುಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾಂತೇಶ ಸ್ವಾಗತಿಸಿದರು. ಸವಿತಾ ಹಾವನೂರ ನಿರೂಪಿಸಿದರೆ, ರೇಖಾ ಹುಣಸಿಮರದ ವಂದಿಸಿದರು. ನೂರಾರು ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.