ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಟಿಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನ

ರಾಣೆಬೆನ್ನೂರಲ್ಲಿ ಟಿಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನ

ರಾಣೆಬೆನ್ನೂರು 20: ನಗರ ಹೊರವಲಯದ ಆರ್ ಟಿ.ಇ ಎಸ್ ಕಾಲೇಜು, ಸಾಹುಕಾರ ಸಭಾಭವನದಲ್ಲಿ,ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ದಿನಾಚರಣೆ ನಿಮಿತ್ತ, ಟಿಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನ ತರಬೇತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ,ಶ್ರೀಮತಿ ಸೀತಾ ಕೋಟಿ ಅವರು,,ಇಂದಿನ ಕಲುಷಿತ ವಾತಾವರಣದಲ್ಲಿ ಅನೇಕ ರೋಗಗಳು ಬರುತ್ತಿರುವುದು ಸಾಮಾನ್ಯ ಸಂಗತಿ,ಟಿಬಿ ಕಾಯಿಲೆ ವಾಸಿಯಾಗದ ಕಾಯಿಲೆ ಏನು ಅಲ್ಲ,  ಸರಿಯಾದ ರೀತಿಯಲ್ಲಿ ವೈದ್ಯರ ಸಲಹೆಯಂತೆ, ನಿಯಮಿತವಾಗಿ ಓಷಧಿ ಸೇವಿಸಬೇಕು, ಇದರಿಂದ ಸಂಪೂರ್ಣ ಗುಣವಾಗುವುದು ಎಂದರು. ತರಬೇತಿ ಸಂಪನ್ಮೂಲ ವ್ಯಕ್ತಿ ಡಾ : ಜಗದೀಶ್ ಪಾಟೀಲ್ ಅವರು ಪ್ರಾಚೀನ ಕಾಲದ 150 ಮಿಲಿಯನ್ ವರ್ಷಗಳ ಹಿಂದಿನ ಕಾಲಗಳಿಂದಲೂ,30ಲಕ್ಷ ವರ್ಷಗಳ ಹಿಂದೆ, ಕ್ಷಯ ರೋಗ ಇರುವ ಇತಿಹಾಸವಿದೆ.ಭಾರತ ದೇಶದಲ್ಲಿ ಸಹ, ಸೂಕ್ತ ಓಷಧಿಯಿಲ್ಲದೆ ಲಕ್ಷಾಂತರ ನಾಗರಿಕರ ಸಾವು ಕಂಡಿದ್ದಾರೆ ಎಂದು ವಿವರಿಸಿದ ಡಾ: ಪಾಟೀಲ ಇಂದು ಸಾಕಷ್ಟು ಚಿಕಿತ್ಸೆಗಳು ಲಭ್ಯವಿದ್ದ ಕಾರಣ ರೋಗವನ್ನು ಗುಣ ಪಡಿಸಲು ಸಾಧ್ಯವಾಗುತ್ತದೆ ಎಂದರು. ಆರ್ ಟಿ ಇ ಎಸ್ ಕಾಲೇಜು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಪ್ರತಿಬಂಧಕ ಘಟಕ ಸೇರಿದಂತೆ ಮತ್ತಿತರ ಸಂಘಟನೆಗಳು ಆಯೋಜಿಸಿದ್ದವು. ಕಾಲೇಜು ಪ್ರಾಚಾರ್ಯ, ಸಿಎ.ಹರಿಹರಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕಾಲೇಜು ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರೇವತಿ ಸಂಗಡಿಗರು ಪ್ರಾರ್ಥಿಸಿದರು ಡಾ: ಸರಸ್ವತಿ ಬಮ್ಮನಾಳ, ಸ್ವಾಗತಿಸಿದರು. ಡಾ :ಮಧು ಕುಮಾರ್ ಆರಿ​‍್ನರೂಪಿಸಿ, ಶರತಗೌಡ ಎಡಚಿ ಪರಿಚಯಿಸಿದರು,ನಾಗರಾಜ ಕುಡುಪಲಿ ವಂದಿಸಿದರು 


ಸುದ್ದಿ ಓದಿ