ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಅಭಿಯಾನ
ಕಾಗವಾಡ 09: ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮತ್ತು ಮತದಾರರ ಪಟ್ಟಿಯ ಪ್ರಕಟಣೆಯ ಈ ಅಭಿಯಾನದ ಉದ್ದೇಶ ಯಾರೂ ಸಹ ಮತದಾರ ಪಟ್ಟಿಯಿಂದ ಹೊರಗುಳಿಯಬಾರದೆಂದು ತಹಶೀಲ್ದಾರರಾದ ರಾಜೇಶ ಬುರ್ಲಿಯವರು ನುಡಿದರು.
ಅವರು ಇಂದು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ತಾಲೂಕ ಆಡಳಿತ, ಶಿವಾನಂದ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾ ಆಡಳಿತದ ನಿರ್ದೇಶನದಂತೆ ವರ್ಷದಲ್ಲಿ ನಾಲ್ಕು ಹಂತದಲ್ಲಿ ಮತದಾರ ಯಾದಿಯ ಪರಿಷ್ಕರಣೆ ನಡೆಯುತ್ತದೆ. ಮತ್ತು ನವ್ಹೆಂಬರ್ 12, 20 ಮತ್ತು ಡಿಸೆಂಬರ್ 3 ಮತ್ತು 4 ನೇ ದಿನಾಂಕಗಳಂದು ಮಿಂಚಿನ ನೊಂದಣಿ ನಡೆಯಲಿದೆ. ಇದರ ಲಾಭವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವ್ಹಿ.ಎಸ್.ತುಗಶೆಟ್ಟಿ ಹಾಗೂ ಮತದಾರರ ಸಾಕ್ಷರತಾ ಸಂಘದ ಸಂಯೋಜಕರಾದ ಡಾ. ಎಸ್.ಪಿ.ತಳವಾರ ಅವರು ಮಾತನಾಡಿ 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಮತದಾರರ ಯಾದಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಮತ್ತು ಇತರರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನುಡಿದರು. ಮತದಾರರ ಸಾಕ್ಷರತಾ ಸಂಘದ ಸಂಯೋಜಕ ಡಾ. ಎಸ್.ಪಿ.ತಳವಾರ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಸಿಡಿಪಿಓ ಸಂಜೀವ ಕುಮಾರ ಸದಲಗಿ, ತಾಲ್ಲೂಕಾ ಪಂಚಾಯತಿಯ ಸಹಾಯ ನಿರ್ದೇಶಕ ವಾಯ್. ಪಿ.ಬೋಳಶೆಟ್ಟಿ, ಪೋಲೀಸ್ ಅಧಿಕಾರಿ ಹಣಮಂತ ನೆರಳೆ, ಸಹಾಯಕ ಕೃಷಿ ಅಧಿಕಾರಿ ಕಾಂತಿನಾಥ ಬಿರಾದಾರ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ಎನ್ಸಿಸಿ ಕೆಡೆಟ್ಗಳು, ಎನ್.ಎಸ್.ಎಸ್. ಹಾಗೂ ಸ್ಕೌಟ್ಸ್್ಘಗೈಡ್ಸ್ ಸ್ವಯಂ ಸೇವಕರು, ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.