ಶರಣ ಹರಳಯ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಧಾರವಾಡ 16: ಪ್ರತಿವರ್ಷದಂತೆ ಈ ವರ್ಷವೂ ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ ವತಿಯಿಂದ ಶರಣ ಹರಳಯ್ಯ ಪ್ರಶಸ್ತಿ ರವಿವಾರ 2024 ಸಪ್ಟೆಂಬರ್ 15ರಂದು ಮುಂಜಾನೆ 11ಘಂಟೆಗೆ ನಡೆಯುವ ಸಮಾರಂಭದಲ್ಲಿ ಕೊಡಲಾಗುವುದು.
ಪ್ರಥಮ ಬಾರಿಗೆ ಫಸ್ಟಕ್ಲಾಸಿನಲ್ಲಿ ಪಾಸಾದ ಅಭ್ಯರ್ಥಿಗಳು ಸನ್ 2024ನೇ ಏಪ್ರಿಲ್ ಮೇ-ಜುಲೈ ತಿಂಗಳಲ್ಲಾದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ಎಪ್ಪತ್ತರ (70ಅ) ಮೇಲೆ ಅಂಕ ಪಡೆದು ಪಾಸಾದ ಅಭ್ಯರ್ಥಿಗಳು; ಹಾಗೂ ಪಿಯುಸಿ; ಬಿ.ಎ; ಎಂ.ಎ; ಬಿ.ಕಾಂ; ಬಿ.ಇಡಿ; ಬಿ.ಇ; ಎಂ.ಎಸ್ಸ; ಎಂ.ಇ; ಎಂ.ಬಿ.ಬಿ.ಎಸ್ ಇತ್ಯಾದಿ ಪರೀಕ್ಷೆಗಳಲ್ಲಿ ಶೇಕಡಾ ಅರವತ್ತರ 60ಅ ರ ಮೇಲೆ ಅಂಕ ಪಡೆದು ಪಾಸಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಾವು ಪಾಸಾದ ತಮ್ಮ ತಮ್ಮ ಪರೀಕ್ಷಾ ಅಂಕಪಟ್ಟಿ (ಝರಾಕ್ಸ್ ಪ್ರತಿ)ಗಳನ್ನು ಸ್ವ ವಿಳಾಸ ಬರೆದ ಅಂಚೆ ಪಾಕೀಟನೊಂದಿಗೆ ಸಮಗಾರ ಹರಳಯ್ಯ ಸಮಾಜ ಜಾತಿ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ) ಹಾಗೂ ತಮ್ಮ ಪಾಸಪೋರ್ಟ ಸೈಜ ಫೋಟೋದೊಂದಿಗೆ ದಿ. 5-08-2024ರೊಳಗಾಗಿ ಕಳುಹಿಸಿಕೊಡಬೇಕು. ಪಿ.ಎಚ್.ಡಿ. ಪದವಿ ಪಡೆದವರು ತಮ್ಮ ಪಿ.ಎಚ್.ಡಿ ವಿಷಯ, ಪಿ.ಎಚ್.ಡಿ ಪಡೆದ ವರ್ಷ ತಿಳಿಸಬೇಕು.
ಮಾಹಿತಿ ಕಳುಹಿಸುವ ಮಾರ್ಕಂಡೇಯ ದೊಡಮನಿ ಶಿಕ್ಷಣ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ ಆತ್ಮಾನಂದ ಕುಟೀರ 19, ಜಯನಗರ 2ನೇ ಕ್ರಾಸ್ ಧಾರವಾಡ ಈ ವಿಳಾಸಕ್ಕೆ ಕಳುಹಿಸಬೇಕೆಂದು ಮಾರ್ಕಂಡೇಯ ದೊಡಮನಿ ಪ್ರಕಟಣೆಗೆ ತಿಳಿಸಿದ್ದಾರೆ.