"ಬಾಲ ಸಾಹಿತ್ಯ ಪುರಸ್ಕಾರ" ಕೃತಿಗಳ ಆಹ್ವಾನ
ಲೋಕದರ್ಶನ ವರದಿ
ಸಿಂದಗಿ: ಸಿಂದಗಿಯ ವಿದ್ಯಾಚೇತನ ಪ್ರಕಾಶನದಿಂದ ಪ್ರತಿವರುಷದಂತೆ ರಾಜ್ಯ ಮಟ್ಟದ ಬಾಲಸಾಹಿತ್ಯ ಪುರಸ್ಕಾರಕ್ಕಾಗಿ 2025ನೇ ಜನೆವರಿ 1 ರಿಂದ ಡಿಶಂಬರ 31ರ ಅವಧಿಯಲ್ಲಿ ಪ್ರಥಮ ಮುದ್ರಣಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಥೆ, ಕವನ, ಮತ್ತು ಕಾದಂಬರಿ ಈ ಮೂರು ವಿಭಾಗಗಳಿಗೆ ಪ್ರತ್ಯೇಕವಾಗಿ ತಲಾ ಐದು ಸಾವಿರ ರೂ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರನೀಡಿ ಲೇಖಕರನ್ನು ಗೌರವಿಸಲಾಗುವುದು. ಹದಿನೆಂಟು ವರ್ಷದ ಒಳಗಿನ ಮಕ್ಕಳೂ ತಮ್ಮ ಸ್ವರಚಿತ ಕೃತಿಗಳನ್ನು ಕಳುಹಿಸಬಹುದು. ಅವರಿಗಾಗಿ ಪ್ರತಿ ವಿಭಾಗಕ್ಕೆ ಎರಡು ಸಾವಿರ ರೂ ನಗದು ಬಹುಮಾನದೊಂದಿಗೆ “ಚಿಗುರು” ಪ್ರಶಸ್ತಿ ನೀಡಲಾಗುವುದು.
ಆಯಾ ವಿಭಾಗದಲ್ಲಿ ಮೂರಕ್ಕಿಂತ ಕಡಿಮೆ ಕೃತಿಗಳು ಬಂದರೆ ಆ ವಿಭಾಗಕ್ಕೆ ಸ್ಪರ್ದೆ ನಡೆಸಲಾಗುವುದಿಲ್ಲ. ಲೇಖಕರು ಕೃತಿಯ ನಾಲ್ಕು ಪ್ರತಿಗಳನ್ನು ಅಗಸ್ಟ 10 ರರೊಳಗಾಗಿ ಹ.ಮ.ಪೂಜಾರ. ಸಂಚಾಲಕರು ವಿದ್ಯಾಚೇತನ ಪ್ರಕಾಶನ ಶ್ರೀ ಸಂಗಮೇಶ್ವರ ಬಡಾವಣೆ. ಸಿಂದಗಿ-586128 ಜಿಲ್ಲಾ: ವಿಜಯಪುರ. ಈ ವಿಳಾಸಕ್ಕೆ ತಲುಪುವಂತೆ ರಜಿಸ್ಟರ್ಡ ಅಂಚೆ ಮೂಲಕ ಕಳುಹಿಸಬೇಕು. ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಒಮ್ಮೆ ಪ್ರಶಸ್ತಿ ಪಡೆದವರು ಅದೇ ವಿಭಾಗಕ್ಕಾಗಿ ಕೃತಿ ಕಳಿಸುವಂತಿಲ್ಲ. ಪ್ರಶಸ್ತಿ ಪಡೆದ ಮೂರು ವರ್ಷಗಳ ನಂತರ ಬೇರೆ ವಿಭಾಗಕ್ಕಾಗಿ ಕೃತಿ ಕಳುಹಿಸಬಹುದು ಎಂದು ವಿದ್ಯಾಚೇತನ ಪ್ರಕಾಶನ ಸಂಚಾಲಕ ಹ.ಮ. ಪೂಜಾರ ತಿಳಿಸಿದ್ದಾರೆ.