ಕಾಗವಾಡ

ಐನಾಪುರ್ 10 ಪಂಪ್‌ಸೆಟ್‌ಗಳ ಕೇಬಲ ಕಳ್ಳತನ: ರೈತರು ಕಂಗಾಲು

ಐನಾಪುರ್ 10 ಪಂಪ್‌ಸೆಟ್‌ಗಳ ಕೇಬಲ ಕಳ್ಳತನ: ರೈತರು ಕಂಗಾಲು

ಕಾಗವಾಡ 18: ತಾಲೂಕಿನ ಐನಾಪುರ್ ಪಟ್ಟಣದಲ್ಲಿ 10 ಪಂಪ್‌ಸೆಟ್‌ಗಳ ಸುಮಾರು 4 ಲಕ್ಷ, ರೂ. ಮೌಲ್ಯದ ಕೇಬಲ ಕಳ್ಳತನ ಮಾಡಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. 

ಶುಕ್ರವಾರ ರಾತ್ರಿ ಕೃಷ್ಣಾ ನದಿ ತೀರದಲ್ಲಿ ಇರುವ ವಿದ್ಯುತ ಪಂಪ್ಸೆಟ್‌ಗಳ ಕ್ಕೆಬಲ ಕಳ್ಳತನ ಮಾಡಿ ನದಿ ತೀರದಲ್ಲಿಯೇ ಕಬ್ಬಿನಗದ್ದೆಯಲ್ಲಿ ಕೇಬಲ ಸುಟ್ಟು ಅದರಲ್ಲಿರುವ ತಾಂಬಾರದ ತಂತೆ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. 

ಐನಾಪುರ ರಲ್ಲಿಯೇ ಒಣ ಬೇಸಾಯ ಮಾಡುವ ರೈತರಿಗೆ ಆಗಿನ ಸಂಸದ ಪ್ರಕಾಶ್ ಹುಕ್ಕೇರಿ ಇವರು 1 ಕೋಟಿ 47 ಲಕ್ಷ ವೆಚ್ಚ ಮಾಡಿ ರಾಜ್ಯ ಸರ್ಕಾರದಿಂದ 100 ಎಕರೆ ಕ್ಷೇತ್ರಕ್ಕಾಗಿ ನೀರಾವರಿ ಯೋಜನೆ ಮಾಡಿಕೊಟ್ಟಿದ್ದರು .ಯೋಜನೆಯ 1 ಲಕ್ಷ ಕಿಮ್ಮತ್ತಿನ ಕೇಬಲ್ ಕಳ್ಳತನ ಮಾಡಿದ್ದಾರೆ. 

ಇದೇ ರೀತಿ ಮಂಗಸೂಳಿ ಗ್ರಾಮದ ಶೇತಕರಿ ವಿಕಾಸ್ ನೀರಾವರಿ ಯೋಜನೆ, ಮೂಳೆ ಗ್ರಾಮದ ಕಾಳಿದಾಸ್ ಅಭಿವೃದ್ಧಿ ಸಂಘ, ಐನಾಪುರ ಪಾಯಪ್ಪ ಕುಡವಕ್ಕಲಿಗಿ ಹೀಗೆ ಹತ್ತು ಪಂಪ್ಸೆಟ್ಗಳ ಕೇಬಲ್ ಕಳ್ಳತನ ಮಾಡಿ ನದಿಯ ತೀರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಕೇಬಲ್ ಸುಟ್ಟು ಅದರಲ್ಲಿ ತಾಂಬರ ತಂತಿ ತೆಗೆದುಕೊಂಡು ಹೋಗಿದ್ದಾರೆ. 

ಈ ನೀರಾವರಿ ಯೋಜನೆಯಲ್ಲಿ ಸುಮಾರು 400 ಕುಟುಂಬಗಳು ಬದುಕುತ್ತಾರೆ. ಈಗ ಮಳೆಯು ಕೈಕೊಟ್ಟಿದ್ದು ನದಿಯಲ್ಲಿ ನೀರು ಸೆಳೆಯಲು ಪ್ರಯತ್ನಿಸಿದರು ಕೇಬಲ ಕಳತನವಾಗಿದೆ, ನಮ್ಮ ರೈತರ ಗೋಳು ಕೇಳುವರ್ಯಾರು ಎಂದು ನೂಂದ್ ರೈತರಾದ ಅಮಗೊಂಡ ಒಡೆಯರ, ಮತ್ತೆ ಸಂತೋಷ್ ಗಾಣಿಗೇರ್ ತಮ್ಮ ಅಳಲನ್ನು ತೋಡಿಕೊಂಡರು. 

ಕೇಬಲ ಕಳ್ಳತನ ವಾಗಿದ್ದರಿಂದ ಇಲ್ಲಿಯ ರೈತರು ಕಾಗವಾಡ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಎ.ಎಸ್‌.ಐ ಹೊರಟ್ಟಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. 

ಕೇಬಲ ಕಳ್ಳತನ ವಾಗಿದ್ದರಿಂದ ನಾವು ಎಲ್ಲ ರೈತರು ಕಂಗಾಲಾಗಿದ್ದು ಶೀಘ್ರದಲ್ಲಿ ಪೊಲೀಸ್ ಇಲಾಖೆಯವರು ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆಗೆ ಸ್ಥಳೀಯ ಶಾಸಕರಾದ ಶ್ರೀಮಂತ ಪಾಟೀಲ್ ಆದೇಶ ನೀಡಬೇಕೆಂದು ಇಲ್ಲಿಯ ರೈತರು ಕೇಳಿಕೊಂಡಿದ್ದಾರೆ. 

ಕೇಬಲ್ ಕಳ್ಳತನವಾಗಿರುವ ರೈತರಲ್ಲಿ ಅಪ್ಪಾಸಾಬ ಫಾರ್‌ಶೆಟ್ಟಿ, ಸಿದ್ದು ಅಡಿಸೇರಿ, ಬಾಳು ಮಾಳಿ, ತಮ್ಮಣ್ಣ ಸಮಾಜಿಗೆ, ಸಂಪತ್ ಲ್ಯಾಂಡ್‌ಗೆ, ಪಾಯಪಾ ಕೊಡುವಕಲ್ಲಿಗಿ, ಸೇರಿದಂತೆ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡರು. 


ಸುದ್ದಿ ಓದಿ