ಕಾಗವಾಡ

ಕೋವಿಡ್-19 ತರಬೇತಿ ಕಾರ್ಯಕ್ರಮ

ಕೋವಿಡ್-19 ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ

ಕಾಗವಾಡ, ಜುಲೈ 20:  ಕೋವಿಡ್-19 ಸಾಂಕ್ರಮಿಕ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಕುರಿತು ಸಕರ್ಾರದ ಆದೇಶದಂತೆ ಉಗಾರ ಖುರ್ದ ಪುರಸಭೆ ವ್ಯಾಪ್ತಿಯ 23 ವಾಡರ್್ಗಳ ಟಾಸ್ಕ್ಫೋಸರ್್ ಹಾಗೂ ಬೂತ ಮಟ್ಟದ ಸಮೀತಿ ರಚಿಸಿ ಅವರಿಗೆ ತರಬೇತಿ ನೀಡುವ ಕಾರ್ಯಕ್ರಮ ಉಗಾರದ ಶ್ರೀಹರಿ ವಿದ್ಯಾಲಯದಲ್ಲಿ ಜರುಗಿತು.

ಸೋಮವಾರರಂದು ಉಗಾರ ಖುರ್ದ ಶ್ರೀಹರಿ ವಿದ್ಯಾಲಯದ ವಿಹಾರ ಸಭಾ ಭವನದಲ್ಲಿ ಟಾಸ್ಕ್ಫೋಸರ್್ ಸಮೀತಿ ಸಭೆ ಹಮ್ಮಿಕೊಳ್ಳಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ಕಮಲವ್ವಾ ಭಾಗೋಜಿ ಇವರ ನೇತೃತ್ವದಲ್ಲಿ ಬೂತ ಮಟ್ಟದ ಸಮೀತಿ ಕಾರ್ಯಕರ್ತರ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ತಡೆಗಟ್ಟಲು ತಂತ್ರಾಂಶವನ್ನು ಬಳಿಸಿಕೊಂಡು ಆನ್ಲೈನ್ ಮುಖಾಂತರ ಸಾಧ್ಯವಾದಷ್ಟು ಮಟ್ಟಕ್ಕೆ ಎಲ್ಲ ಸದಸ್ಯರಿಗೆ ತರಬೇತಿ ನೀಡಲಾಯಿತು. ಉಗಾರದ 23 ವಾಡರ್್ಗಳಲ್ಲಿಯ ಚುನಾಯಿತ ಸದಸ್ಯರು ಸಮೀತಿ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ಮಾಜಿ ಜನಪ್ರತಿನಿಧಗಳು, ಸ್ವ-ಸಹಾಯ ಸಂಘದವರು, ಸ್ಥಳೀಯ ಆರೋಗ್ಯ ವೈದ್ಯಾಧಿಕಾರಿಗಳು, ಕಾಗವಾಡ ಪೊಲೀಸ್ ಠಾಣೆಯ ಎ.ಎಸ್.ಐ ಎಸ್.ಡಿ.ಕುಂಬಾರ, ಸ್ವಯಂ-ಸೇವಾ ಪ್ರತಿನಿಧಗಳು, ಬಿ.ಎಲ್.ಒ ಇವರ ನೇತೃತ್ವದಲ್ಲಿ ಕೋವಿಡ್-19 ಯಶಸ್ವಿವಾಗಿ ತಡೆಗಟ್ಟಲು ಕೆಲ ಮಾರ್ಗಸೂಚಿಗಳು ಆನ್ಲೈನ್ ಮುಖಾಂತರ ನೀಡಲಾಯಿತು.

ಬೆಂಗಳೂರಿನ ಪೌರಾಡಳಿತ ಇಲಾಖೆಯ ನಿದರ್ೇಶಕರಾದ ಡಾ. ಬಿ.ಬಿ.ಕಾವೇರಿ, ಅವರೊಂದಿಗೆ ಪಂಚಾಯತಿ ರಾಜ್ಯ ಗ್ರಾಮೀಣ ಇಲಾಖೆ ನಿದರ್ೇಶಕರು ಮಾಹಿತಿ ನೀಡಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ಪ್ರಕಾಶ ಥಬಾಜ್, ಅವಿನಾಶ ಮೋರೆ, ಮದನ ದೇಶಿಂಗೆ, ಸ್ವಾತಿ ಕುಂಬಾರ, ಯೊಗೇಶ ಕುಂಬಾರ, ಶಂಕರ ವಾಘಮೋಡೆ, ಸೇರಿದಂತೆ ಅನೇಕ ಸದಸ್ಯರು, ಉಗಾರ ಆರೋಗ್ಯ ಇಲಾಖೆಯ ಅಶೋಕ ಹಿರೇಮಠ, ಪುರಸಭೆ ಮ್ಯಾನೇಜರ್ ಯು.ಎಸ್.ಘಟಕಾಂಬಳೆ, ಕೆ.ಪಿ.ಗಾವಡೆ, ಪ್ರಸಾದ ಗುರವ್ ಸೇರಿದಂತೆ ಅನೇಕರು ಇದ್ದರು.

 

ಸುದ್ದಿ ಓದಿ