ಅಥಣಿ

ಅಥಣಿ ಪಶುವೈದ್ಯಕೀಯ, ಕೃಷಿ ಮಹಾವಿದ್ಯಾಲಯದ ಶಂಕುಸ್ಥಾಪನೆಗೆ ಸಿಎಂ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ಗ್ರಾಮೀಣ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಅಥಣಿ ಪಶುವೈದ್ಯಕೀಯ, ಕೃಷಿ ಮಹಾವಿದ್ಯಾಲಯದ ಶಂಕುಸ್ಥಾಪನೆಗೆ ಸಿಎಂ  ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿಕೆ: ಗ್ರಾಮೀಣ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ 

     ಅಥಣಿ  05 : ದಿ.ಭಾವುರಾವ್ ದೇಶಪಾಂಡೆ ಪಶುವೈದ್ಯಕೀಯ ಮಹಾವಿದ್ಯಾಲಯದ ಉದ್ಘಾಟನೆ ಮತ್ತು ಪ್ರಸಕ್ತ ಬಜೆಟ್‌ನಲ್ಲಿ ಮಂಜೂರಾದ ಕೃಷಿ ಮಹಾವಿದ್ಯಾಲಯದ ಶಂಕುಸ್ಥಾಪನೆಗೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರದ ಪ್ರಮುಖ ಸಚಿವರೋರ್ವರು ಅಥಣಿಗೆ ಆಗಮಿಸಲಿದ್ದಾರೆ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ತಿಳಿಸಿದರು.  

ಅವರು ಅಥಣಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.  

     ಅಥಣಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರಲ್ಲಿ ವಿಶೇಷ ಅನುದಾನ ಕೊಡಬೇಕು ಎಂದು ಕೇಳಿಕೊಂಡಿದ್ದೆ. ಹೀಗಾಗಿ ಮುಖ್ಯಮಂತ್ರಿಗಳು ನನ್ನ ಮನವಿಗೆ ಸ್ಪಂದಿಸಿ 20 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭಗೊದೆ ಈಗಾಗಲೇ ಈ ಅನುದಾನದಲ್ಲಿ 1.50 ಕೋಟಿ ಅನುದಾನದಲ್ಲಿ ನದಿ ಇಂಗಳಗಾಂವದಿಂದ ಅರವಟಿಗೆ ವರೆಗಿನ ರಸ್ತೆಗೆ, 80 ಲಕ್ಷ ಅನುದಾನದಲ್ಲಿ ಕರ್ಲಟ್ಟಿಯಿಂದ ಹಳೆ ಸಾವಳಗಿ ರಸ್ತೆಗೆ, 1 ಕೋಟಿ ಅನುದಾನದಲ್ಲಿ ಹಳೆ  ತಂಗಡಿ ರಸ್ತೆ ಹಾಗೂ  80 ಲಕ್ಷ ಅನುದಾನದಲ್ಲಿ ಹೊಸಟ್ಟಿಯಿಂದ ಮದಭಾವಿ ಕೂಡು  ರಸ್ತೆವರೆಗಿನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿರುವೆ ಹಾಗೂ ಮುಂಬರುವ ಕೆಲವೇ ದಿನಗಳಲ್ಲಿ ಇನ್ನೂಳಿದ ಎಲ್ಲ ರಸ್ತೆಗಳ ಕಾಮಗಾರಿಗಳಿಗೂ ಕೂಡ ಚಾಲನೆ ನೀಡುವುದಾಗಿ ಹೇಳಿದ ಅವರು ಇನ್ನಷ್ಟು ರಸ್ತೆಗಳ ಅಭಿವೃದ್ಧಿಗಾಗಿ 40 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೆಲವೇ ದಿನಗಳಲ್ಲಿ ಅನುದಾನವೂ ಕೂಡ ಮಂಜೂರಾಗಲಿದೆ ಎಂದು ಹೇಳಿದರು.  

       ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ಅಥಣಿ ಮತಕ್ಷೇತ್ರದ ಬರಗಾಲ ಪೀಡೀತ ಪ್ರದೇಶಗಳಲ್ಲಿ ನೀರಿನ ಬವಣೆ ತಪ್ಪಿಸಲು ಕೆರೆ ತುಂಬಿಸುವ ಯೋಜನೆಗೆ ಚಾಲನೆ ದೊರಲಿದ್ದು, ಈ ಯೋಜನೆಯಡಿ ಝುಂಜರವಾಡದಿಂದ ಕೃಷ್ಣಾ ನದಿಯಿಂದ ಯಲ್ಲಮನವಾಡಿ ಕೆರೆಗೆ ನೀರನ್ನು ಲಿಫ್ಟ ಮಾಡಿಕೊಂಡು ಅಲ್ಲಿಂದ ಕೋಹಳ್ಳಿ, ಬಾಡಗಿ, ಅಡಹಳ್ಳಟ್ಟಿ ಕೆರೆಗಳನ್ನು 120 ಕೋಟಿ ರೂ.ಗಳ ಅನುದಾನದಲ್ಲಿ ನೀರು ತುಂಬಿಸಲಾಗುವುದು ಎಂದ ಅವರು 22 ಕೋಟಿ ರೂ.ಗಳ ಅನುದಾನದಲ್ಲಿ ಮಂಜೂರಾತಿ ಆಗಿದ್ದು, ಈ ಯೋಜನೆಗೆ ಬರುವ ಜೂನ್ ತಿಂಗಳಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಗುವುದು ಎಂದರು.  

          ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ್ದ ದೇಶದ ಗೃಹ ಸಚಿವರಾದ ಅಮೀತ್ ಶಹಾ ಕೋರ್ ಕಮೀಟಿ ಸಭೆಯಲ್ಲಿ ಭಾಗವಹಿಸಿದ್ದರು. ಅಮೀತ್ ಶಹಾ ಪಕ್ಷದ ಸಂಘಟನೆಗೆ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರ ಸಲಹೆಯಂತೆ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪ ಹಾಗೂ ರಾಜ್ಯ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು. 

 ನಾನು ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡದಲ್ಲಿ ಇದ್ದು, ಮಂಗಳೂರು ಭಾಗದಲ್ಲಿ, ಶಿವಮೊಗ್ಗ  ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ ಎಂದು ತಿಳಿಸಿದ ಅವರು 2023 ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

       ಬಿಜೆಪಿ ಧುರೀಣರಾದ ಶ್ರೀಶೈಲ ನಾಯಿಕ, ಶಿವರುದ್ರ ಘೂಳಪ್ಪನವರ, ಅಣ್ಣಸಾಹೇಬ ನಾಯಿಕ, ಜಿಲ್ಲಾ ಪಂಚಾಯತನ ವೀರಣ್ಣಾ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ