ಸಿಎಮ್ ಬದಲಾವಣೆ ಸಾಧ್ಯವಿಲ್ಲ
ಗೋಕಾಕ 17: ನಾಳೆಯಿಂದ ಹೊಸ ಯಡಿಯೂರ್ಪ ಬರುತ್ತಾರೆ. ಸಿಎಮ್ ಬದಲಾವಣೆ ಸಾಧ್ಯವಿಲ್ಲ. ಮುಂದಿನ ಎರಡು ವರ್ಷ ಯಡಿಯೂರ್ಪನವರೆ ಸಿಎಮ್ ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಅವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜೂನ್ 18ರ ನಂತರ ಹೊಸ ಯಡಿಯೂರ್ಪ ಆಗಿ ರಾಜ್ಯದ ಮುಂದೆ ಬರಲಿದ್ದಾರೆ. ಮುಂದಿನ ಚುನಾವಣೆಯೂ ಯಡಿಯೂರ್ಪನವರ ನೇತ್ರತ್ವದಲ್ಲಿ ನಡೆಯಲಿದೆ ಎಂದರು.
ನಾನು ಈಗಲೂ ಸಚಿವರಿದ್ದಂತೆ. ದೇವರ ಆಶೀರ್ವಾದ ನನ್ನ ಮೇಲಿದೆ ಎಂದು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಯಾವ ರೀತಿಯಾಗಿ ಕೆಲಸ ಮಾಡಿದ್ದೇವೋ ಅದೇ ರೀತಿ ಕೆಲಸ ಮಾಡುತ್ತೇವೆ. ದೇವರ ಶಕ್ತಿ ಕೊಟ್ಟಿದ್ದಾನೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರ್ಪ ಅವರನ್ನು ನಂಬಿ ನಾವು ಬಿಜೆಪಿಗೆ ಬಂದಿದ್ದೆವೆ. ನಾನೂ ಈಗಲೂ ಸಚಿವನಿದ್ದಂತೆ. ಸಚಿವರಾಗಿ ಮಾತ್ರ ಕೆಲಸ ಮಾಡಬೇಕು ಅಂತಾ ಏನು ಇಲ್ಲ. ಶಾಸಕರಾಗಿಯೂ ಸಹ ಕೆಲಸಗಳನ್ನು ಮಾಡಬಹುದು ಎಂದರು.
ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರ್ಪನವರು ಅಂತಹ ಮನುಷ್ಯರಲ್ಲ. ಅವರು ಸಹ ಒಳ್ಳೆಯವರು. ಎಲ್ಲವನ್ನೂ ನಮ್ಮ ಹಾಗೇ ಮುಕ್ತವಾಗಿಯೇ ಹೇಳುತ್ತಾರೆ. ಅವರು ಹೇಳಿದ ಉದ್ದೇಶವೇ ಬೇರೆ ಆದರೆ ನೀವು ತಪ್ಪು ತಿಳಿದುಕೊಂಡು ಮಾಧ್ಯಮಗಳು ಸುದ್ದಿ ತಿರುಚಲಾಗಿದೆ. ಸಚಿವ ಯೋಗೇಶ್ವರ ನನ್ನ ಮಿತ್ರ, ಸರ್ಕಾರ ರಚನೆಗೆ ಯೋಗೇಶ್ವರ, ಉಳಿದ ಶಾಸಕರ ಪಾತ್ರ ದೊಡ್ಡದಿದೆ. ಯೋಗೇಶ್ವರ ಮುಖ್ಯಮಂತ್ರಿಯೊಂದಿಗೆ ಕುಳಿತು ಚರ್ಚೆ ನಡೆಸಬೇಕು. ನಾನು ಸಹ ಯೋಗೇಶ್ವರ ಸಿಎಂ ಪರ ಇರುವಂತೆ ಮನವೊಲಿಸುವೆ ಎಂದು ಭರವಸೆ ನೀಡಿದರು.