ಇಂಡಿ

ಮಕ್ಕಳ ಬೇಡಿಕೆಯಂತೆ 24 ಗಂಟೆಯಲ್ಲಿ ಮಕ್ಕಳಿಗೆ ಕಂಪ್ಯೂಟರ ವಿತರಿಸಿದ ಸಿಇಓ

ಮಕ್ಕಳ ಬೇಡಿಕೆಯಂತೆ 24 ಗಂಟೆಯಲ್ಲಿ ಮಕ್ಕಳಿಗೆ ಕಂಪ್ಯೂಟರ ವಿತರಿಸಿದ ಸಿಇಓ

ಇಂಡಿ: ತಾಲೂಕಿನ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬೇಡಿಕೆಯಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು 24 ಗಂಟೆಯಲ್ಲಿ ಮಕ್ಕಳಿಗೆ ಕಂಪ್ಯೂಟರ ವಿತರಣೆ ಮಾಡಿದ್ದಾರೆ. ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ತಮಗೆ ಕಂಪ್ಯೂಟರ ಶಿಕ್ಷಣ ಅಗತ್ಯವಿದೆ. ಆ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂಬ ಮನವಿ ಮಾಡಿದ್ದರು. 

ಮನವಿಗೆ ಸ್ಪಂದಿಸಿದ ಸಿಂಧೆ ಅವರು, ಮಕ್ಕಳ ಕಲಿಕೆಯ ಗುಣಮಟ್ಟ ಉನ್ನತಿ ಕಾರಣಕ್ಕೆ ಇದು ಅಗತ್ಯವಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ತಾಂತ್ರಿಕ ಉಪಕರಣದ ಮೂಲಕ ಅವರ ಶಿಕ್ಷಣದ ಸಾಧನೆ ಉತ್ತುಂಗಕ್ಕೆ ಹೋಗಬೇಕು. ಅವರಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚ ಬೇಕು. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿ ಆಗಲಿ ಎಂಬ ದೆಸೆಯಿಂದ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ವಿತರಣೆ ಮಾಡಿ ಅವರ ಭವಿಷ್ಯ ಉಜ್ವಲ ಆಗಲಿ ಎಂದು ಶುಭ ಹಾರೈಸಿದ್ದಾರೆ.  ಇಂಡಿ ತಾಲೂಕಿನ ಕಾರ್ಯನಿರ್ವಧಿಕಾರಿ ಸುನೀಲ ಮದ್ದಿನ,  ಚಡಚಣ ತಾಲೂಕಿನ ಕಾರ್ಯನಿರ್ವಧಿಕಾರಿ ಸಂಜಯ ಖಡ್ಗೇಕರ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.  ತಾಲೂಕಿನ ಬಬಲಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬೇಡಿಕೆಯಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಕಾಧಿಕಾರಿ ರಾಹುಲ ಶಿಂಧೆ ಕಂಪ್ಯೂಟರ ವಿತರಣೆ ಮಾಡಿದರು. 


ಸುದ್ದಿ ಓದಿ