ಅಥಣಿ

ಡಿಕೆ ಶಿವಕುಮಾರ್ ಮೇಲೆ ಸಿಡಿ ಆರೋಪ ! ಸತ್ಯಾಸತ್ಯತೆ ಹೊರ ಬರುವುದು: ಡಿಸಿಎಂ ಲಕ್ಷ್ಮಣ್ ಸವದಿ.

ಡಿಕೆ ಶಿವಕುಮಾರ್ ಮೇಲೆ ಸಿಡಿ ಆರೋಪ ! ಸತ್ಯಾಸತ್ಯತೆ ಹೊರ ಬರುವುದು: ಡಿಸಿಎಂ ಲಕ್ಷ್ಮಣ್ ಸವದಿ.
ಫಲಾನುಭವಿಗಳಿಗೆ ಲಘು ಸರಕು ಸಾಗಾಣಿಕೆ ವಾಹನಗಳ ವಿತರಣೆ ಮಾಡಿದ ಡಿಸಿಎಮ್ ಲಕ್ಷ್ಮಣ ಸವದಿ.

ಅಥಣಿ 28: ರಮೇಶ್ ಜಾರಕಿಹೊಳಿ ಅವರದು ಎನ್ನಲಾಗುತ್ತಿರುವ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮೇಲೆ ಆರೋಪ ಬಂದಿದೆ. ಸರ್ಕಾರ ಈಗಾಗಲೇ ಎಸ್‍ಐಟಿ ರಚನೆ ಮಾಡಿದೆ ಆದಷ್ಟು ಬೇಗನೆ ಸತ್ಯಾಸತ್ಯತೆ ಹೊರ ಬರುವುದು ಎಂದು ಮಾಧ್ಯಮಗಳಿಗೆ ಡಿಸಿಎಂ ಲಕ್ಷ್ಮಣ್ ಸವದಿ ಪ್ರತಿಕ್ರಿಯೆಸಿದರು.

ಅಥಣಿ ಪಟ್ಟನದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಕರ್ನಾಟಕ ಸರ್ಕಾರ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು ಮತ್ತು ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಬೆಳಗಾವಿ ರವರ ಸಂಯುಕ್ತ ಆಶ್ರಯದಲ್ಲಿ 2019-20 ನೇ ಸಾಲಿನ ಬುಡುಕಟ್ಟು ಉಪಯೋಜನೆ ವಿಶೇಷ ಕೇಂದ್ರಿಯ ನೆರೆವಿನಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ 23 ಫಲಾನುಭವಿಗಳಿಗೆ ಲಘು ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಾಗಲೇ ಸಿಡಿ ಪ್ರಕರಣ ಭೇದಿಸಲು ಸರ್ಕಾರ ಎಸ್‍ಐಟಿ ರಚನೆ ಮಾಡಿದೆ, ಸ್ವತಂತ್ರವಾಗಿ ಕಾರ್ಯ ಮಾಡಲು ಸರ್ಕಾರ ಅವಕಾಶ ನೀಡಿದ್ದರಿಂದ ಸತ್ಯಾಸತ್ಯತೆ ಆದಷ್ಟು ಬೇಗನೆ ಬರುತ್ತದೆ, ನಿನ್ನೆ ಗೃಹ ಸಚಿವರು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಸುದ್ದಿ ಓದಿ