ಮನರಂಜನೆ

ಅಮಲಿನ ನಂಟು :ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್‍, ನಾಳೆ ವಿಚಾರಣೆ

ಅಮಲಿನ ನಂಟು :ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್‍, ನಾಳೆ ವಿಚಾರಣೆ

ಬೆಂಗಳೂರು, ಸೆ 25 : ಸ್ಯಾಂಡಲ್ ವುಡ್‍ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ ನಟಿ, ನಿರೂಪಕಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ನೋಟಿಸ್ ಜಾರಿಗೊಳಿಸಿದೆ.ಬಾಲಿವುಡ್ ನಟ, ಡ್ರಗ್ ಪೆಡ್ಲಿಂಗ್ ಆರೋಪಿ ಕಿಶೋರ್ ಶೆಟ್ಟಿ, ಡಾನ್ಸರ್ ತರುಣ್ ಹಾಗೂ ಇನ್ನಿತರ ಆರೋಪಿಗಳ ವಿಚಾರಣೆ ಕೈಗೊಂಡಿರುವ ಅಧಿಕಾರಿಗಳು ತಮಗೆ ದೊರಕಿರುವ ಮಾಹಿತಿ ಆಧಾರದಲ್ಲಿ ಅನುಶ್ರೀ ವಿಚಾರಣೆಗೆ ಮುಂದಾಗಿದ್ದಾರೆ. 

 ಈ ಸಂಬಂಧ ಗುರುವಾರ ಬೆಂಗಳೂರಿಗೆ ಆಗಮಿಸಿದ ಮಂಗಳೂರು ಸಿಸಿಬಿಯ ಒಂದು ತಂಡ, ಖುದ್ದು ಅನುಶ್ರೀ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದೆ. ಹೀಗಾಗಿ ನಾಳೆ ಶನಿವಾರ ಮಂಗಳೂರಿಗೆ ಬರುವಂತೆ ಸೂಚಿಸಿದೆ. ಈ ವೇಳೆ ಶುಕ್ರವಾರವೇ ವಿಚಾರಣೆಗೆ ಹಾಜರಾಗಲು ಅನುಮತಿ ನೀಡುವಂತೆ ಅನುಶ್ರೀ ಕೋರಿದ್ದು, ಇದಕ್ಕೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.  ಅನುಶ್ರೀ ತಮ್ಮೊಂದಿಗೆ ಮಂಗಳೂರು ಹಾಗೂ ಬೆಂಗಳೂರಿನ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಕಿಶೋರ್ ಹಾಗೂ ತರುಣ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಕಿಶೋರ್ ಹಾಗೂ ತರುಣ್ ತಮಗೆ 10 ವರ್ಷಗಳ ಹಿಂದೆ ರಿಯಾಲಿಟಿ ಶೋನಲ್ಲಿ ಪರಿಚಯವಾಗಿದ್ರು.  ಮೂರು ವರ್ಷಗಳ ಹಿಂದೆ ತರುಣ್ ಮಂಗಳೂರಿನಲ್ಲಿ ತೆರೆದ ಡಾನ್ಸ್ ಕ್ಲಾಸ್ ಉದ್ಘಾಟನೆಗೆ ಹೋಗಿದ್ದೆ. ಆಮೇಲೆ ಅವರೊಡನೆ ಸಂಪರ್ಕವಿಲ್ಲ ಎಂದು ಸ್ವತಃ ಅನುಶ್ರೀ ಹೇಳಿಕೊಂಡಿದ್ದಾರೆ. ನಿಜವಾಗಿ ಅನುಶ್ರೀಗೆ ಅಮಲಿನ ನಂಟಿತ್ತೇ? ಆಕೆ ಪಾಲ್ಗೊಳ್ಳುತ್ತಿದ್ದುದು ಸಾಮಾನ್ಯ ಪಾರ್ಟಿಗಳಲ್ಲೋ ಅಥವಾ ಡ್ರಗ್ಸ್ ಪಾರ್ಟಿಗಳಲ್ಲೋ ಎಂಬುದು ಸಿಸಿಬಿ ವಿಚಾರಣೆಯಲ್ಲಿ ತಿಳಿದುಬರಲಿದೆ. 


ಸುದ್ದಿ ಓದಿ