ಹೂವಿನ ಹಡಗಲಿ

ಸಿಬಿಎಸ್‌ಇ ರಿಸಲ್ಟ್‌: ಮೊದಲ ಪ್ರಯತ್ನದಲ್ಲೇ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯ ಸಾಧನೆ

ಸಿಬಿಎಸ್‌ಇ ರಿಸಲ್ಟ್‌: ಮೊದಲ ಪ್ರಯತ್ನದಲ್ಲೇ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆಯ ಸಾಧನೆ

ಹೂವಿನ ಹಡಗಲಿ 16: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು.ತಾಲೂಕಿನ ಹೊಳಗುಂದಿಯ ಗ್ಲೋಬಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮೊದಲ ಬ್ಯಾಚನ ವಿದ್ಯಾರ್ಥಿಗಳು ದಾಖಲೆಯ 100ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದ್ದಾರೆಕಳೆದ ಫೆಬ್ರುವರಿ ತಿಂಗಳಲ್ಲಿ ಸಿಬಿಎಸ್‌ಇ 10 ತರಗತಿಯ ಬೋರ್ಡ್‌ ನಡೆದಿದ್ದವು. ಪರೀಕ್ಷೆಗಳುಬೋರ್ಡ್‌ ಪರೀಕ್ಷೆಯಲ್ಲಿ 25 ವಿದ್ಯಾರ್ಥಿಗಳುಪರೀಕ್ಷೆಗೆ ಹಾಜರಾಗಿದ್ದರು, ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿರುವುದು ಶ್ಲಾಘನೀಯ. 25 ವಿದ್ಯಾರ್ಥಿಗಳ ಪೈಕಿ 6 ಡಿಸ್ಟಿಂಕ್ಷನ್, 11 ಪಸ್ಟ್‌ ಕ್ಲಾಸ್, 8 ಸೆಕೆಂಡ್ ಕ್ಲಾಸ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ರಫಿ, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿಗಳು ಶುಭ ಹಾರೈಸಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ