ರಾಣೆಬೆನ್ನೂರ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಕಾವ್ಯ ಕೆಂಪಣ್ಣನವರ ಜಿಲ್ಲೆಗೆ ಪ್ರಥಮ

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ: ಕಾವ್ಯ ಕೆಂಪಣ್ಣನವರ ಜಿಲ್ಲೆಗೆ ಪ್ರಥಮ

ರಾಣಿಬೆನ್ನೂರ 15:  ಸ್ಥಳೀಯ ಖನ್ನೂರ ವಿದ್ಯಾನಿಕೇತನ ಶಾಲೆಯ  ಪ್ರಸ್ತುತ ಸಾಲಿನ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು. ಕಾವ್ಯ ಕೆಂಪಣ್ಣನವರ ಶೇ. 97.40ರಷ್ಟು ಅಂಕ ಪಡೆದು ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.  

ಹರ್ಷಿತಾ ಎನ್ ಕೂನಬೇವು (ದ್ವಿತೀಯ) 94% ಆದರ್ಶ ಕೆ ವಾಲೀಕಾರ (ತೃತೀಯ) ಶೇ. 90.60 ರಷ್ಟು ಅಂಕ ಪಡೆದಿದ್ದಾರೆ. ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಛೇರಮನ್ ಡಾ. ಪ್ರವೀಣಕುಮಾರ ಖನ್ನೂರ, ಸಿ.ಇ.ಓ ಡಾ. ಶೈಲಶ್ರೀ ಪಿ ಖನ್ನೂರ , ಆಡಳಿತಾಧಿಕಾರಿ ನಾಗೇಶ ಮುರಡಣ್ಣನವರ ಪ್ರಾಂಶುಪಾಲ ಮನೀಷ್ ಎ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ